Saturday, June 28, 2025
spot_imgspot_img
spot_imgspot_img

ಬೆಳ್ಳಂಬೆಳಗ್ಗೆ ನಟಿ ರಾಗಿಣಿ ಮನೆ ಮೇಲೆ ಸಿಸಿಬಿ ದಾಳಿ.

- Advertisement -
- Advertisement -

*ನಟಿ ರಾಗಿಣಿ ಮೊಬೈಲ್ ಸೀಜ್

ಬೆಂಗಳೂರು: ಬೆಳ್ಳಂಬೆಳಗ್ಗೆ ಸಿಸಿಬಿ ಅಧಿಕಾರಿಗಳು ನಟಿ ರಾಗಿಣಿ ದ್ವಿವೇದಿಗೆ ಶಾಕ್ ನೀಡಿದ್ದಾರೆ. ನಟಿ ರಾಗಿಣಿಯ ಬೆಂಗಳೂರಿನ ಯಲಹಂಕದಲ್ಲಿರುವ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ರೇಡ್ ಮಾಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಸ್ಯಾಂಡಲ್ ವುಡ್ ಗೆ ಡ್ರಗ್ಸ್ ದಂಧೆ ನಂಟು ಆರೋಪಕ್ಕೆ ಸಂಬಂಧಿಸಿ ನಿನ್ನೆ ರಾಗಿಣಿಗೆ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟಿಸ್ ನೀಡಿತ್ತು. ಆದರೆ ಅನಾರೋಗ್ಯ ಕಾರಣ ನೀಡಿ ರಾಗಿಣಿ ವಿಚಾರಣೆಗೆ ಹಾಜರಾಗಿಲ್ಲ. ಹೀಗಾಗಿ ಇಂದು ವಿಚಾರಣೆಗೆ ಹಾಜರಾಗಲೇಬೇಕು ಎಂದು ಸಿಸಿಬಿ ಮತ್ತೊಂದು ನೋಟಿಸ್ ಜಾರಿ ಮಾಡಿತ್ತು.

ಆದರೆ ಸಾಕ್ಷ್ಯ ನಾಶ ಮಾಡುವ ಅನುಮಾನದಿಂದಾಗಿ ನ್ಯಾಯಾಲಯದಲ್ಲಿ ಸರ್ಚ್ ವಾರೆಂಟ್ ಪಡೆದು ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಯಲಹಂಕದ ಅನನ್ಯ ಅಪಾರ್ಟ್ ಮೆಂಟ್ ನಲ್ಲಿರು ವ ಫ್ಲ್ಯಾಟ್ ಮೇಲೆ ಬೆಳಗ್ಗೆ 6.34ರ ಸುಮಾರಿಗೆ ಸಿಸಿಬಿ ಅಧಿಕಾರಿಗಳು 2 ಕಾರುಗಳಲ್ಲಿ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ನಟಿ ರಾಗಿಣಿಯನ್ನು ಸಿಸಿಬಿ ವಶಕ್ಕೆ ಪಡೆಯುವ ಸಾಧ್ಯತೆಯಿದೆ ಎನ್ನಲಾಗ್ತಿದೆ.

ರಾಗಿಣಿ ಮೊಬೈಲ್ ಗಳು ಸೀಜ್:
ರಾಗಿಣಿ ಮನೆಯಲ್ಲಿ 8 ಅಧಿಕಾರಿಗಳ ಸಿಸಿಬಿ ತಂಡ ಪರಿಶೀಲನೆ ನಡೆಸುತ್ತಿದೆ. ಈ ವೇಳೆ ಸಿಸಿಬಿ ಅಧಿಕಾರಿಗಳು ಅಂಜುಮಾಲ ರಾಗಿಣಿ ಮನೆಯಲ್ಲಿದ್ದ ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಯಾರಿಗೂ ಕರೆ ಮಾಡದಂತೆ ಪೊಲೀಸರು ತಡೆದಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಮತ್ತೊಂದುಕಡೆ ರಾಗಿಣಿ ಮನೆ ಮೇಲೆ ದಾಳಿಯಾಗುತ್ತಿದ್ದಂತೆ ರಾಗಿಣಿ ಪರ ವಕೀಲರು ಹಾಗೂ ಆಪ್ತರು ಅನನ್ಯ ಅಪಾರ್ಟ್ ಮೆಂಟ್ ಬಳಿ ಧಾವಿಸಿದ್ದಾರೆ.

- Advertisement -

Related news

error: Content is protected !!