Friday, June 19, 2026
spot_imgspot_img
spot_imgspot_img

ವಿಟ್ಲ: ಬೆಂಗಳೂರು ಸುಪ್ರಜಿತ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

- Advertisement -
- Advertisement -
vtv vitla

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜು ಸುವರ್ಣ ರಂಗಮಂದಿರದಲ್ಲಿ ಬೆಂಗಳೂರು ಸುಪ್ರಜಿತ್ ಫೌಂಡೇಶನ್ ವತಿಯಿಂದ 360 ವಿದ್ಯಾರ್ಥಿಗಳಿಗೆ 19,40ಲಕ್ಷ ವಿದ್ಯಾರ್ಥಿ ವೇತನವನ್ನು ಬೆಂಗಳೂರು ಸುಪ್ರಚಿತ್ ಪೌಂಡೇಶನ್‌ನ ಅಜಿತ್‌ ಕುಮಾರ್ ರೈ ವಿತರಿಸಿದರು.

ವಿದ್ಯಾರ್ಥಿ ವೇತನ ಪರಿಶೀಲನೆ ಮಾಡಿದ ಎಲ್ಲರನ್ನೂ ಗೌರವಿಸಲಾಯಿತು. ವಿಠಲ ವಿದ್ಯಾ ಸಂಘ ಸಂಚಾಲಕ ಎಲ್.ಎನ್. ಕೂಡೂರು, ವಿಠಲ ಸುಪ್ರಜಿತ್ ಐಟಿಐ ಸಂಚಾಲಕ ಅಲ್ಪಾನ್ಸೋ ಸಿಲ್ವೆಸ್ಟರ್‌ ಮಸ್ಕರೇನ್ಹಸ್ ಮಾತನಾಡಿದರು.

ವಿಠಲ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಆದರ್ಶ ಬೊಕ್ಕಾಡಿ ಸ್ವಾಗತಿಸಿದರು. ಉದ್ಯಮಿ ಸುಬ್ರಯ ಪೈ ಪ್ರಸ್ತಾವನೆಗೈದರು. ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ರಮೇಶ್ ಬಿ. ಕೆ, ಶ್ರೀಪತಿ ನಾಯಕ್, ರಾಜಶೇಖರ, ಪ್ರಕಾಶ್ ನಾಯಕ್‌, ಅಣ್ಣಪ್ಪ ಶಾಸ್ತಾನ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ವಿಠಲ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕಿರಣ್ ಕುಮಾರ್ ವಂದಿಸಿದರು. ರಾಧಾಕೃಷ್ಣ ಎರುಂಬು ನಿರೂಪಿಸಿದರು. ಮೋಹನ್ ಬಿ ಸಹಕರಿಸಿದರು.

- Advertisement -

Related news

error: Content is protected !!