Saturday, June 28, 2025
spot_imgspot_img
spot_imgspot_img

ಮಂಗಳೂರು: ಇಂದು ಮೇಯರ್‌, ಉಪಮೇಯರ್‌ ಚುನಾವಣೆ

- Advertisement -
- Advertisement -

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಬಿಜೆಪಿ ಆಡಳಿತದ ಮೂರನೇ ಅವಧಿಯ ಮೇಯರ್‌, ಉಪಮೇಯರ್‌ ಹಾಗೂ ನಾಲ್ಕು ಸ್ಥಾಯೀ ಸಮಿತಿ ಸದಸ್ಯರ ಚುನಾವಣೆ ಶುಕ್ರವಾರ ನಡೆಯಲಿದೆ. ಅಪರಾಹ್ನ 12 ಗಂಟೆಗೆ ಮತದಾನ ನಿಗದಿಯಾಗಿದ್ದು, ಚುನಾವಣೆ ರಾಜಕೀಯವಾಗಿ ಕುತೂಹಲ ಕೆರಳಿಸಿದೆ.

ಮೇಯರ್‌ ಸ್ಥಾನ “ಸಾಮಾನ್ಯ” ಹಾಗೂ ಉಪ ಮೇಯರ್‌ ಸ್ಥಾನವು “ಹಿಂದುಳಿದ ವರ್ಗ ಮಹಿಳೆ” ಮೀಸಲಾತಿಗೆ ನಿಗದಿಯಾಗಿದೆ. ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತರ ಅಧ್ಯಕ್ಷತೆಯಲ್ಲಿ ಮತದಾನ ನಡೆಯಲಿದೆ.

ಕೊನೆಯ ಹಂತದ ಬದಲಾವಣೆ ಹೊರತುಪಡಿಸಿದರೆ ಬಿಜೆಪಿಯ ಹಿರಿಯ ಸದಸ್ಯ ಜಯಾನಂದ ಅಂಚನ್‌ ಮೇಯರ್‌ ಹುದ್ದೆಗೆ ಬಿಜೆಪಿಯಿಂದ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ. ಅಭ್ಯರ್ಥಿ ಆಯ್ಕೆಗಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಸಹಿತ ವಿವಿಧ ಮುಖಂಡರು ತೀವ್ರ ಚರ್ಚೆ ನಡೆಸಿದ್ದರು.

astr
- Advertisement -

Related news

error: Content is protected !!