Tuesday, July 1, 2025
spot_imgspot_img
spot_imgspot_img

ನರ್ಸ್ ನನ್ನು ಕಟ್ಟಿ ಹಾಕಿ ಆರೋಗ್ಯ ಕೇಂದ್ರದಲ್ಲೇ ಸಾಮೂಹಿಕ ಅತ್ಯಾಚಾರ; ಅಪ್ರಾಪ್ತ ಸೇರಿ ಮೂವರು ಅಂದರ್

- Advertisement -
- Advertisement -

ಛತ್ತೀಸ್‌ಗಢದ ಮಹೇಂದ್ರಗಢ ಜಿಲ್ಲೆಯ ಚಿಪ್ಚಿಪಿ ಗ್ರಾಮದಲ್ಲಿ ಆರೋಗ್ಯ ಕೇಂದ್ರದಲ್ಲಿ ನರ್ಸ್ ಒಬ್ಬರನ್ನು ಕಟ್ಟಿಹಾಕಿ ನಾಲ್ವರು ಸಾಮೂಹಿಕ ಅತ್ಯಾಚಾರಗೈದ ಘಟನೆ ನಡೆದಿದ್ದು, 17 ವರ್ಷದ ಯುವಕ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಅತ್ಯಾಚಾರಗೈದ ಆರೋಪಿಗಳು ಹಲ್ಲೆ ನಡೆಸಿದ್ದು, ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ನರ್ಸ್ ಆರೋಪಿಸಿದ್ದಾರೆ.

ಸಂತ್ರಸ್ಥೆಯು ಏಕಾಂಗಿಯಾಗಿ ಆರೋಗ್ಯ ಕೇಂದ್ರದಲ್ಲಿದ್ದು, ಇದನ್ನು ಗಮನಿಸಿದ ಆರೋಪಿಗಳು ಕೇಂದ್ರಕ್ಕೆ ನುಗ್ಗಿ ಆಕೆಯನ್ನು ಕಟ್ಟಿಹಾಕಿ, ಅವಳ ಬಾಯಿಯನ್ನು ಬಿಗಿದರು. ನಂತರ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರಗೈದಿದ್ದು, ಬಳಿಕ ನರ್ಸ್ ಮನೆಯವರಿಗೆ ಮಾಹಿತಿ ನೀಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

- Advertisement -

Related news

error: Content is protected !!