Sunday, July 26, 2026
spot_imgspot_img
spot_imgspot_img

ಪುತ್ತೂರು: ನವವಿವಾಹಿತೆ ನೇಣು ಬಿಗಿದು ಆತ್ಮಹತ್ಯೆ

- Advertisement -
- Advertisement -

ಪುತ್ತೂರು: ಪುತ್ತೂರು ತಾಲ್ಲೂಕಿನ ಮಾಡನ್ನೂರು ಗ್ರಾಮದ ಸಾಂತ್ಯ ಎಂಬಲ್ಲಿ ಏಳು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ನವ ವಿವಾಹಿತೆಯೊಬ್ಬರು ಪತಿಯ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಸಾಂತ್ಯ ನಿವಾಸಿ ಜಯಪ್ರಕಾಶ್ ಅವರ ಪತ್ನಿ ವೈಶಾಲಿ (26) ಆತ್ಮಹತ್ಯೆ ಮಾಡಿಕೊಂಡವರು.

ವೈಶಾಲಿ ಅವರ ವಿವಾಹ ಜಯಪ್ರಕಾಶ್ ಅವರ ಜತೆ 7ತಿಂಗಳ ಹಿಂದೆಷ್ಟೇ ನಡೆದಿದ್ದು, ವೈಶಾಲಿ ಅವರು ಶನಿವಾರ ಸಂಜೆ ವೇಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತರ ತಾಯಿ ನೀಡಿದ ದೂರಿನಂತೆ ಸಂಪ್ಯ ಠಾಣೆಯ ಪೊಲೀಸರು ಪ್ರಕರಣ ದಾಖಿಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!