Saturday, July 25, 2026
spot_imgspot_img
spot_imgspot_img

ಮಂಗಳೂರು ಮಹಾನಗರಪಾಲಿಕೆ : ರಾಹುಲ್ ರತ್ನಂ ಪಾಂಡೆ ನೂತನ ಆಯುಕ್ತರಾಗಿ ನೇಮಕ

- Advertisement -
- Advertisement -

ಮಂಗಳೂರು: ಮಂಗಳೂರು ಮಹಾನಗರಪಾಲಿಕೆಯ ಆಯುಕ್ತ ರವಿಚಂದ್ರ ನಾಯಕ್ ಅವರಿಗೆ ವರ್ಗಾವಣೆಯಾಗಿದ್ದು, 2018ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ನ ಐಎಎಸ್ ಅಧಿಕಾರಿ ರಾಹುಲ್ ರತ್ನಂ ಪಾಂಡೆ ಅವರನ್ನು ಸರಕಾರ ಮಂಗಳೂರು ಮಹಾನಗರಪಾಲಿಕೆಯ ನೂತನ ಆಯುಕ್ತರನ್ನಾಗಿ ನಿಯೋಜಿಸಿ ಆದೇಶ ಹೊರಡಿಸಿದೆ.

ರಾಹುಲ್ ರತ್ನಂ ಪಾಂಡೆ ಬೆಂಗಳೂರಿನ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

ರಾಹುಲ್ ರತ್ನಂ ಪಾಂಡೆ ಮೂಲತ: ಉತ್ತರ ಪ್ರದೇಶದವರು.ರಾಹುಲ್ ರತ್ನಂ ಪಾಂಡೆ ಬೆಂಗಳೂರಿನ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ರಾಹುಲ್ ರತ್ನಂ ಪಾಂಡೆ ಮೂಲತ: ಉತ್ತರ ಪ್ರದೇಶದವರು.ರಾಹುಲ್ ರತ್ನಂ ಪಾಂಡೆ, ಐ.ಎ.ಎಸ್ (ಕರ್ನಾಟಕ ಕೇಡರ್: 2018) ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಿ, ಕೆ.ಎ.ಎಸ್ ಅಧಿಕಾರಿ ರವಿಚಂದ್ರ ನಾಯಕ್ ಅವರ ವರ್ಗಾವಣೆಯಿಂದ ತೆರವಾದ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರ ಹುದ್ದೆಗೆ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಲಾಗಿದೆ.

- Advertisement -

Related news

error: Content is protected !!