- Advertisement -
- Advertisement -
ಬಂಟ್ವಾಳ: ಆಟೋ ರಿಕ್ಷಾ ಚಾಲಕರೊಬ್ಬರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಮಾರ್ಗ ಮಧ್ಯೆ ಹಠಾತ್ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಮಾಣಿ ಸಮೀಪದಲ್ಲಿ ಘಟನೆ ನಡೆದಿದೆ. ಕಲ್ಲಡ್ಕ ಕುದ್ರೆಬೆಟ್ಟು ನಿವಾಸಿ ಜಯಕರ ಪೂಜಾರಿ (45) ಮೃತಪಟ್ಟ ಆಟೋ ಚಾಲಕ.

ಜಯಕರ ಪೂಜಾರಿ ಅವರು ಎಂದಿನಂತೆ ಕೆಲ ಮಕ್ಕಳನ್ನು ಶಾಲೆಗೆ ಬಿಡುತ್ತಿದ್ದರು. ಮಕ್ಕಳನ್ನು ಆಟೋರಿಕ್ಷಾದಲ್ಲಿ ಶಾಲೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಮಕ್ಕಳು ಜೆರಾಕ್ಸ್ ಶಾಪ್ ಹತ್ತಿರ ಆಟೋ ನಿಲ್ಲಿಸಲು ಸೂಚಿಸಿದ್ದಾರೆ. ಈ ವೇಳೆ ಆಟೋರಿಕ್ಷಾ ನಿಲ್ಲಿಸಿದ್ದು, ಮಕ್ಕಳು ಜೆರಾಕ್ಸ್ ತೆಗೆದು ಹಿಂದಿರುಗಿದ ವೇಳೆ ಅವರು ಕುಸಿದು ಬಿದ್ದಿದ್ದರು ಎನ್ನಲಾಗಿದೆ.
ತಕ್ಷಣ ಅವರನ್ನು ಹತ್ತಿರದ ಕ್ಲಿನಿಕ್ ಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

- ಅ.1ರಿಂದ ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ಗೆ ಆಧಾರ್ ಇ-ಕೆವೈಸಿ ಕಡ್ಡಾಯ
- ಬಂಟ್ವಾಳ: ಅಬ್ದುಲ್ ರಹಿಮಾನ್ ಕೊಲೆ ಪ್ರಕರಣ: ಭರತ್ ಕುಮ್ಡೇಲು ಸೇರಿ 6 ಮಂದಿಯ ವಿರುದ್ಧ ಗೂಂಡಾ ಕಾಯ್ದೆ
- ಮಾಡತಡ್ಕ ಅಂಗನವಾಡಿಯಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಹಾಗೂ ಪೋಷಣ್ ಅಭಿಯಾನ ಮಾಸಾಚರಣೆ ಕಾರ್ಯಕ್ರಮ
- ಉಪ್ಪಿನಂಗಡಿ–ಇಳಂತಿಲ–ಮುರ ಮಾರ್ಗದಲ್ಲಿ KSRTC ಬಸ್ ಸೇವೆ ಆರಂಭ: ದೀರ್ಘ ಹೋರಾಟಕ್ಕೆ ಫಲ
- ಶೈಕ್ಷಣಿಕ ಪ್ರವಾಸದಲ್ಲಿ ಸೆಲ್ಫಿ, ರೀಲ್ಸ್ಗೆ ಬ್ರೇಕ್ – ಸರ್ಕಾರಿ ಕಾಲೇಜುಗಳಿಗೆ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿ


- Advertisement -








