ಟಿ20 ವಿಶ್ವಕಪ್ 2022ರಫೈನಲ್ ಕದನದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್ ತಂಡಗಳು ಪ್ರಶಸ್ತಿಗಾಗಿ ಕಾದಾಡುತ್ತಿವೆ. ಈಗಾಗಲೇ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇದರಿಂದ ಮೆಲ್ಬೋರ್ನ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಬರ್ ಅಜಮ್ ನಾಯಕತ್ವದ ಪಾಕಿಸ್ತಾನ ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸುವ ಮೂಲಕ ಮಹತ್ವದ ಪಂದ್ಯದಲ್ಲಿ ಇಂಗ್ಲೆಂಡ್ ತಂಡಕ್ಕೆ 138 ರನ್ಗಳ ಸಾಧಾರಣ ಮೊತ್ತದ ಟಾರ್ಗೆಟ್ ನೀಡಿದೆ.
ಬ್ಯಾಟಿಂಗ್ನಲ್ಲಿ ಅಬ್ಬರಿಸದ ಪಾಕ್:
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು. ಇನ್ನು, ಪಾಕಿಸ್ತಾನ ಪರ ಮಹತ್ವದ ಪಂದ್ಯದಲ್ಲಿ ಮೊಹಮ್ಮದ್ ರಿಜ್ವಾನ್ ಬೇಗ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದ್ದಾರೆ.
ಮೊಹಮ್ಮದ್ ರಿಜ್ವಾನ್ 15 ರನ್, ಬಾಬರ್ ಅಜಮ್ 32 ರನ್, ಮೊಹಮ್ಮದ್ ಹ್ಯಾರಿಸ್ 8 ರನ್, ಶಾನ್ ಮಸೂದ್ 38 ರನ್, ಇಫ್ತಿಕರ್ ಅಹ್ಮದ್ ಶೂನ್ಯ, ಶಾದಾಬ್ ಖಾನ್ 20 ರನ್, ಮೊಹಮ್ಮದ್ ನವಾಜ್ 5 ರನ್, ಮೊಹಮ್ಮದ್ ವಾಸಿಂ 4 ರನ್, ಶಾಹೀನ್ ಶಾ ಆಫ್ರಿದಿ 5 ರನ್ ಮತ್ತು ಹ್ಯಾರಿಸ್ ರೌಫ್ 1 ರನ್ ಗಳಿಸಿ ಔಟಾಗದೇ ಉಳಿದರು.










