Thursday, July 3, 2025
spot_imgspot_img
spot_imgspot_img

ಸಾಧನೆಯ ಹಾದಿಯಲ್ಲಿ ಕರಾವಳಿಯ ಪ್ರತಿಭೆ ಆತ್ಮಿಕಾ.” ಚುಕ್ಕಿ ” ಹೆಸರಿನಲ್ಲಿ ವಿಟ್ಲದ ಆತ್ಮಿಕಾ ಪ್ರಖ್ಯಾತಿ.

- Advertisement -
- Advertisement -

ವಿಟ್ಲ:-“ಚುಕ್ಕಿ” ಎಂಬ ಹೆಸರಿನಲ್ಲೇ ಪ್ರಖ್ಯಾತಿ ಪಡೆದಿರುವ 7ರ ಪೋರಿ ಆತ್ಮಿಕಾ, ತನ್ನ ಎಳೇವಯಸ್ಸಿನಲ್ಲೇ ಹಾಡುಗಾರಿಕೆ, ನಟನೆ, ನಾಟ್ಯ, ಫ್ಯಾಷನ್ ಶೋಗಳಲ್ಲಿ ಮಿಂಚಿ ಸೈ ಎನಿಸಿಕೊಂಡಿದ್ದಾರೆ.ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಖಾಸಗಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ, ಡ್ರಾಮ ಜೂನಿಯರ್ಸ್, ಕನ್ನಡದ ಕೋಗಿಲೆ ಮುಂತಾದ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿ ಜನಮನ ಗೆದ್ದಿದ್ದಾರೆ.

ಈಗಾಗಲೇ ಹಲವು ಚಲನಚಿತ್ರಗಳಲ್ಲೂ ನಟಿಸಿರುವ ಚುಕ್ಕಿ, “ಮಳೆನೀರ ಕೊಯ್ಲು” ಎಂಬ ಸಾಕ್ಷ್ಯಚಿತ್ರದಲ್ಲಿ ಮುಖ್ಯಪಾತ್ರಧಾರಿಯಾಗಿ ನಟಿಸಿ ತನ್ನ ಅಮೋಘವಾದ ಅಭಿನಯದಿಂದ ಎಲ್ಲರ ಗಮನ ಸೆಳೆದಿದ್ದಾರೆ. ಜೊತೆಗೆ ತುಳು ಕಿರುಚಿತ್ರ “ ಮೋಕೆದ ಮೆಗ್ದಿ” ಯಲ್ಲಿ ನಟನೆ ಮಾಡಿ ತಂಗಿಯ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ತುಳು ಚಿತ್ರರಂಗಕ್ಕೆ ಭರವಸೆಯ ಬಾಲನಟಿಯಾಗುವ ಹಾದಿಯಲ್ಲಿ ಇದ್ದಾರೆ.

ಹಲವಾರು ಜಾಹೀರಾತುಗಳಲ್ಲಿಯೂ ಅಭಿನಯಿಸಿರುವ ಆತ್ಮಿಕಾ, “ಹಳ್ಳಿಮನೆ ಹೊರನಾಡು ಪ್ರಾಡಕ್ಟ್ಸ್”ನ ರಾಯಭಾರಿಯೂ ಆಗಿದ್ದಾರೆ. ಇದರ ಜೊತೆಗೆ ಮಿಂತ್ರಾ, ಅಮೆಜೋನ್ ನಂತ 20 ಕ್ಕೂ ಅಧಿಕ ಪ್ರಸಿದ್ಧ ಬ್ರಾಂಡ್ ಗಳ ರಾಯಭಾರಿಯಾಗಿ ಆಯ್ಕೆಯಾಗಿರುವುದು ಹೆಮ್ಮೆಯ ವಿಷಯ .

Chukki darling ?????❤❤❤

Posted by Chukki on Friday, 6 March 2020

ವಿಟ್ಲದ ದಿವಾಕರ್ ಹಾಗೂ ವಿದ್ಯಾ ದಂಪತಿಗಳ ಪುತ್ರಿಯಾದ ಆತ್ಮಿಕಾ ಪ್ರಸ್ತುತ ವಿಟ್ಲ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು ಭವಿಷ್ಯದ ಸ್ಟಾರ್ ಆಗುವ ಎಲ್ಲಾ ಸೂಚನೆಯು ಇದೆ. ಚುಕ್ಕಿ ” ಹೆಸರಿನ ವಿಟ್ಲದ ಆತ್ಮಿಕಾ ಪ್ರಖ್ಯಾತಿ ಹೊಂದಿ ಸಾಧನೆಯನ್ನು ಮಾಡಲಿ. ಪುಟ್ಟ ಬಾಲೆಯ ಸಾಧನೆಯು ಎಲ್ಲರಿಗೂ ಸ್ಪೂರ್ತಿಯಾಗಲಿ ಭವಿಷ್ಯದಲ್ಲಿ ಇನ್ನಷ್ಟು ಸಾಧನೆಯನ್ನು ಮಾಡಲಿ.

- Advertisement -

Related news

error: Content is protected !!