Thursday, July 3, 2025
spot_imgspot_img
spot_imgspot_img

ಉಡುಪಿ: ಶಾಲಾ ಕಾಲೇಜುಗಳಿಂದ ಕಳ್ಳತನ; ಇಬ್ಬರು ಖದೀಮರು ಅಂದರ್

- Advertisement -
- Advertisement -

ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಲ್ಲಿ ಸರಣಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕುಮಾರಸ್ವಾಮಿ (59) ಮತ್ತು ಜಾಹೀದ್ ಸಿನಾನ್ (32) ಬಂಧಿತರು.

ಉಡುಪಿ, ದಕ್ಷಿಣಕನ್ನಡ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಒಟ್ಟು 37 ಶಾಲೆಗಳಿಗೆ ಖದೀಮರು ಕನ್ನ ಹಾಕಿದ್ದರು. ಕೋಟ ಠಾಣಾ ವ್ಯಾಪ್ತಿಯಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದಾಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಳ್ಳತನ ಪ್ರಕರಣದಲ್ಲಿ ಆರೋಪಿ ಕುಮಾರಸ್ವಾಮಿ 2014 ರಿಂದ 2021 ರ ವರೆಗೆ 7 ವರ್ಷ ಕಾಲ ಕಾರವಾರ ಜೈಲಿನಲ್ಲಿದ್ದ. ಜೈಲಿನಿಂದ ಬಿಡುಗಡೆಗೊಂಡ ಬಳಿಕ ಮತ್ತೋರ್ವ ಆರೋಪಿ ಜಾಹೀದ ಸಿನಾನ್ ಜೊತೆ ಸೇರಿ ಮತ್ತೆ ಕಳ್ಳತನಕ್ಕೆ ಇಳಿದಿದ್ದ ಎಂದು ತಿಳಿದುಬಂದಿದೆ. ಒಟ್ಟು 37 ಕಡೆ ಶಾಲಾ ಕಾಲೇಜುಗಳ ಬೀಗ ಮುರಿದು ಬೆಲೆಬಾಳುವ ಸೊತ್ತುಗಳನ್ನು ಕದ್ದಿದ್ದರು.

- Advertisement -

Related news

error: Content is protected !!