Friday, June 27, 2025
spot_imgspot_img
spot_imgspot_img

ಕಾಸರಗೋಡು ಮೂಲದ ರೂಪದರ್ಶಿಯ ಗ್ಯಾಂಗ್‌ ರೇಪ್‌ ಪ್ರಕರಣ; ನಾಲ್ವರ ಬಂಧನ

- Advertisement -
- Advertisement -

ಕಾಸರಗೋಡು ಮೂಲದ 19 ವರ್ಷದ ಮಾಡೆಲ್ ಒಬ್ಬಳನ್ನು ಮೂವರು ಕಾರಿನಲ್ಲಿ ಸಾಗುತ್ತಲೇ ಅತ್ಯಾಚಾರಗೈದ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ಒಟ್ಟು ನಾಲ್ವರನ್ನು ಬಂಧಿಸಿದ್ದು ಪೂರ್ವ ನಿಯೋಜಿತ ಕೃತ್ಯ ಎಂದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಓರ್ವ ಮಹಿಳೆ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕೊಡುಂಗಲ್ಲೂರು ನಿವಾಸಿಗಳಾದ ನಿತಿನ್, ವಿವೇಕ್, ಸುದೀಪ್ ಹಾಗೂ ರಾಜಸ್ಥಾನಿ ಯುವತಿ ಡಿಂಪಲ್ ಎಂಬವರನ್ನು ಬಂಧಿಸಿದ್ದಾರೆ.

ಕೊಚ್ಚಿನ್ ಶಿಪ್ ಯಾರ್ಡ್ ಬಳಿಯಿರುವ ಪಬ್ ಗೆ ಮಾಡೆಲ್ ತನ್ನ ಗೆಳೆತಿ ಡಿಂಪಲ್ ಜೊತೆ ತೆರಳಿದ್ದಳು. ಆನಂತರ ತಡರಾತ್ರಿ ಆಕೆಯನ್ನು ಕಾಕ್ಯನಾಡ್ ನಲ್ಲಿರುವ ಆಕೆಯ ಪಿಜಿಗೆ ಬಿಡುವುದಾಗಿ ಹೇಳಿ ಗೆಳೆಯರು ಸೇರಿ ಕಾರು ಹತ್ತಿಸಿದ್ದಾರೆ. ಕುಡಿದು ಟೈಟ್ ಆಗಿದ್ದ ಯುವತಿಯನ್ನು ಕಾರಿನಲ್ಲಿ ತಿರುಗಾಡುತ್ತಲೇ ಗ್ಯಾಂಗ್ ರೇಪ್ ಮಾಡಿದ್ದಾರೆ. ಆನಂತರ ಹಲ್ಲೆ ನಡೆಸಿ, ನಸುಕಿನಲ್ಲಿ ಯುವತಿಯನ್ನು ಕಾಕನಾಡಿನ ಪಿಜಿ ಸೆಂಟರಿಗೆ ಬಿಟ್ಟು ಹೋಗಿದ್ದಾಗಿ ಪ್ರಕರಣ ದಾಖಲಾಗಿದೆ.

ಯುವತಿಯನ್ನು ಪಿಜಿಯಲ್ಲಿದ್ದ ಆಕೆಯ ಮತ್ತೋರ್ವ ಗೆಳತಿ ಆಸ್ಪತ್ರೆಗೆ ದಾಖಲು ಮಾಡಿದ್ದಳು. ವೈದ್ಯರು ಪರೀಕ್ಷಿಸಿ ಗ್ಯಾಂಗ್ ರೇಪ್ ಆಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೇಪ್ ಒಳಗಾಗಿರುವ ಯುವತಿ ಕಾಸರಗೋಡಿನವಳಾಗಿದ್ದು, ಕೊಚ್ಚಿಯಲ್ಲಿದ್ದುಕೊಂಡು ಓದುತ್ತಿದ್ದಳು.

ಘಟನೆ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಿರುವ ಯುವತಿ, ರಾಜಸ್ಥಾನಿ ಯುವತಿ ಡಿಂಪಲ್ ಲಾಂಬಾ ಜೊತೆಗೆ ಪಬ್ ಗೆ ಹೋಗಿದ್ದೆ. ಅಲ್ಲಿ ಬೀಯರ್ ಜೊತೆಗೆ ಅಮಲು ಬರಿಸುವ ಪದಾರ್ಥ ಮಿಕ್ಸ್ ಮಾಡಿ ನನಗೆ ಕೊಟ್ಟಿದ್ದಾರೆ. ಹಿಂತಿರುಗಿ ಹೋಗುವ ಸಂದರ್ಭದಲ್ಲಿ ಒತ್ತಾಯದಿಂದ ಕಾರಿನಲ್ಲಿ ಡ್ರಾಪ್ ಕೊಡುವುದಾಗಿ ಹೇಳಿದ್ದಾರೆ. ಕಾರಿನಲ್ಲಿ ತೆರಳುತ್ತಿದ್ದಾಗಲೇ ಕೊಡುಂಗಲ್ಲೂರು ನಿವಾಸಿಗಳಾದ ನಿತಿನ್, ವಿವೇಕ್, ಸುದೀಪ್ ಸೇರಿ ಅತ್ಯಾಚಾರ ನಡೆಸಿದ್ದಾರೆ. ಆರೋಪಿಗಳು ಡಿಂಪಲ್ ಲಾಂಬಾಗೆ ಗೆಳೆಯರಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾಳೆ. ಪೊಲೀಸ್ ತನಿಖೆಯಲ್ಲಿ ಇದೊಂದು ಪೂರ್ವ ನಿಯೋಜಿತ ಕೃತ್ಯ ಎಂಬ ಸ್ಪೋಟಕ ಸತ್ಯ ಬಯಲಾಗಿದೆ.

- Advertisement -

Related news

error: Content is protected !!