Thursday, June 13, 2024
spot_imgspot_img
spot_imgspot_img

ಮಂಗಳೂರು: ಮುಲ್ಕಿ ಕೊಲೆ ಪ್ರಕರಣ; ತಲೆಮರೆಸಿಕೊಂಡ ಆರೋಪಿಗಳ ಪತ್ತೆಗೆ ಲುಕ್‌ಔಟ್ ನೋಟಿಸ್ ಜಾರಿ

- Advertisement -G L Acharya panikkar
- Advertisement -

ಮಂಗಳೂರು: ಮುಲ್ಕಿಯಲ್ಲಿ ನಡೆದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿ ತಲೆ ಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಸಹಕರಿಸಲು ಪೊಲೀಸರು ಮನವಿಮಾಡಿದ್ದಾರೆ.

ಮುಲ್ಕಿ ಪೊಲೀಸ್ ಠಾಣೆ ಮೊಕದ್ದಮೆ ಸಂ. 38/2020 ಕಲಂ 143, 147, 148, 341, 307, 302, 395 ಜೊತೆಗೆ 149 ಐಪಿಸಿ ಕೊಲೆ ಪ್ರ ಕರಣದಲ್ಲಿ ತಲೆ ಮರೆಸಿಕೊಂಡಿರುವ 1ನೆ ಆರೋಪಿಯಾದ ದಾವೂದ್ ಹಕೀಮ್, ಬಪ್ಪನಾಡು ಮಂಗಳೂರು ಈತನನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಈಗಾಗಲೇ ನ್ಯಾ ಯಾಲಯವು ಹಲವು ಬಾರಿ ದಸ್ತಗಿರಿ ವಾರೆಂಟ್ ಹೊರಡಿಸಿದ್ದು ಹಾಗೂ ಪ್ರಸ್ತುತ ಈತನ ವಿರುದ್ಧ ನ್ಯಾಯಾಲಯವು ಪ್ರೋಕ್ಲಮೇಶನ್ ಕೂಡ ಹೊರಡಿಸಲಾಗಿದ್ದರೂ ಈತನು ನ್ಯಾ ಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿರುತ್ತಾನೆ.

ಆರೋಪಿಯು ಈವರೆಗೆ ಪತ್ತೆಯಾಗದೇ ಇರುವುದರಿಂದ ಈ ಕೆಳಗಿನ ಚಹರೆ ಇರುವ ವ್ಯಕ್ತಿಯು ಕಂಡು ಬಂದರೆ ಈ ಕೆಳಗಿನಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಲು ಕೋರಲಾಗಿದೆ. ಪೊಲೀಸ್ ನಿರೀಕ್ಷಕರು, ಮುಲ್ಕಿ ಪೊಲೀಸ್ ಠಾಣೆ: 9480805332, ಪೊಲೀಸ್ ಉಪ ನಿರೀಕ್ಷಕರು ಮುಲ್ಕಿ ಪೊಲೀಸ್ ಠಾಣೆ 9480805359.

vtv vitla
- Advertisement -

Related news

error: Content is protected !!