Saturday, June 6, 2026
spot_imgspot_img
spot_imgspot_img

ವಿಟ್ಲ: (ಡಿ.16) ಕರ್ಣಾಟಕ ಬ್ಯಾಂಕ್‌ನ 895ನೇ ಶಾಖೆ ಮತ್ತು ಮಿನಿ ಇ-ಲಾಬಿ ಉದ್ಘಾಟನಾ ಸಮಾರಂಭ

- Advertisement -
- Advertisement -

ವಿಟ್ಲ: ಕರ್ಣಾಟಕ ಬ್ಯಾಂಕ್‌ನ 895ನೇ ಶಾಖೆ ಮತ್ತು ಮಿನಿ ಇ-ಲಾಬಿ ಉದ್ಘಾಟನಾ ಸಮಾರಂಭವು ಡಿ.16 ರಂದು ಯಮಹಾ ಷೋರೂಂ ಎದುರು, ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬಳಿ ನಡೆಯಲಿದೆ.

ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರರು ಬಂಗಾರು ಅರಸರು ವಿಟ್ಲ ಅರಮನೆ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ವಿಟ್ಲ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ನಾಗರಾಜ್ ಹೆಚ್.ಇ ಮಿನಿ ಇ-ಲಾಬಿ ಯನ್ನು ಉದ್ಘಾಟಿಸಲಿದ್ದಾರೆ. ಬ್ಯಾಂಕ್‌ನ ಜನರಲ್ ಮ್ಯಾನೇಜರ್ ಮಹಾಲಿಂಗೇಶ್ವರ ಕೆ. ಅಧ್ಯಕ್ಷತೆ ವಹಿಸಲಿದ್ದಾರೆ. ವೇದಿಕೆಯಲ್ಲಿ ಬ್ರಾಂಚ್ ಮ್ಯಾನೇಜರ್ ಭರತ್‌ರಾಜ್ ಹೆಚ್, ಮಂಗಳೂರು ಪ್ರಾದೇಶಿಕ ಕಚೇರಿ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಡ್ಯಾನಿಶ್ ಉಪಸ್ಥಿತರಿರುವರು.

ಸ್ಥಳ: ಡೋರ್ ನಂ. – 1-667, ನೆಲಮಹಡಿ, ಶ್ರೀ ಕಾಂಪ್ಲೆಕ್ಸ್ ಯಮಹಾ ಷೋರೂಂ ಎದುರು, ಮಂಗಳೂರು ರಸ್ತೆ
ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬಳಿ, ವಿಟ್ಲ- 574243, ಬಂಟ್ವಾಳ ತಾಲೂಕು.

- Advertisement -

Related news

error: Content is protected !!