Monday, May 6, 2024
spot_imgspot_img
spot_imgspot_img

Boycott Pathaan; ಕೇಸರಿ ಬಿಕಿನಿ ತೊಟ್ಟು ವಿವಾದಕ್ಕೀಡಾದ ಡಿಪ್ಪಿ “ನಾಚಿಕೆಯಿಲ್ಲದ ಬಣ್ಣ” ಎಂದ ಸಿನಿಮಾದ ವಿರುದ್ಧ ನೆಟ್ಟಿಗರ ಕಿಡಿ

- Advertisement -G L Acharya panikkar
- Advertisement -

ಶಾರುಖ್ ಖಾನ್ ಪಠಾಣ್ ಸಿನಿಮಾದ ಹಾಡು ರಿಲೀಸ್ ಆಗಿದ್ದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಧರಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಭಾರಿ ನಿರೀಕ್ಷೆ ಮೂಡಿಸಿದ್ದ ಪಠಾಣ್ ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಚಿತ್ರದ ‘ಬೇಷರಂ ರಂಗ್​…’ ಹಾಡು ಬಿಡುಗಡೆಯಾಗಿ ಕೆಲವೇ ಕೆಲವೇ ಗಂಟೆಗೆ ಮಿಲಿಯನ್ ಗಟ್ಟಲೇ ವ್ಯೂವ್ಸ್ ಪಡೆದುಕೊಂಡಿದೆ.

ಬೇಷರಂ ರಂಗ್ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ತುಂಡುಡುಗೆ ಧರಿಸಿದ್ದು, ಶಾರುಖ್‌ ಹಸಿರು ಬಣ್ಣದ ಬಟ್ಟೆ ತೊಟ್ಟಿದ್ದು ಕೂಡ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ‘ಬೇಷರಂ ರಂಗ್’ ಅಂದರೆ ಕನ್ನಡದಲ್ಲಿ ನಾಚಿಕೆ ಇಲ್ಲದ ಬಣ್ಣ ಎಂದಾಗುತ್ತದೆ. ಕೇಸರಿ ಬಣ್ಣಕ್ಕೆ ನಾಚಿಕೆ ಇಲ್ಲದ ಬಣ್ಣ ಎಂದು ಜರಿದಿದ್ದಾರೆ ಎಂದು ಹೋಲಿಕೆ ಮಾಡಿಕೊಂಡು ಹಲವರು ಗರಂ ಆಗಿದ್ದಾರೆ. ಬೇಕು ಅಂತಾನೇ ಈ ರೀತಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ ಎಂದು ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಹೀಗಾಗಿ ಬೈಕಾಟ್ ಪಠಾಣ್ ಟ್ರೆಂಡ್ ಹೆಚ್ಚಿದೆ. ಆದರೆ, ಈ ಹಾಡಿನಲ್ಲಿ ದೀಪಿಕಾ ಹಾಕಿರುವ ಡ್ರೆಸ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಸಖತ್ ಗ್ಲಾಮರಸ್ ಆಗಿ ಮೂಡಿ ಬಂದಿರುವ ಈ ಹಾಡಿನ ವಿರುದ್ಧ ಅನೇಕರು ಆಕ್ರೋಶ ಹೊರಹಾಕುತ್ತಿದ್ದು, ದೀಪಿಕಾ ಇಷ್ಟು ಹಾಟ್ ಆಗಿ ಕಾಣಿಸಿಕೊಳ್ಳುವ ಅವಶ್ಯತೆ ಇತ್ತಾ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ.

ಶಾರುಖ್​ ಖಾನ್​ ನಟನೆಯ ಸಿನಿಮಾಗಳನ್ನು ಬಹಿಷ್ಕಾರ ಮಾಡಬೇಕು ಎಂದು ಒಂದಷ್ಟು ಜನರು ಒತ್ತಾಯ ಮಾಡುತ್ತಿದ್ದಾರೆ. ಈಗ ಸೋಶಿಯಲ್​ ಮೀಡಿಯಾದಲ್ಲಿ #BoycottPathaan ಎಂಬ ಟ್ರೆಂಡ್​ ಶುರುವಾಗಿದೆ. ಈಗಾಗಲೇ ಅನೇಕರು ಬಹಿಷ್ಕರಿಸಿ ಎಂದು ಹ್ಯಾಷ್ ಟ್ಯಾಗ್ ಹಾಕಿ ಟ್ರೆಂಡ್ ಮಾಡುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ‘ಪಠಾಣ್​’ ಸಿನಿಮಾದ ಬಾಕ್ಸ್​ ಆಫೀಸ್​ ಕಲೆಕ್ಷನ್ ಮೇಲೆ ಹೊಡೆತ ಬೀಳುವ ಸಾಧ್ಯತೆ ಇದೆ.

ಇದು ಶಾರುಖ್ ಖಾನ್ ವೃತ್ತಿ ಜೀವನದ ಮಹತ್ವದ ಸಿನಿಮಾ ಎನ್ನಲಾಗುತ್ತಿದ್ದು, ಸತತ ಸೋಲಿನ ಬಳಿಕ ಬಾಲಿವುಡ್ ಗೆ ಈ ಸಿನಿಮಾ ಶಕ್ತಿ ತುಂಬಲಿದೆ ಎಂದು ಹೇಳಲಾಗುತ್ತಿದೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್ ಕಾಂಬಿನೇಷನ್ ಇರುವುದರಿಂದ ಬಾಕ್ಸ್ ಆಫೀಸಿನಲ್ಲೂ ಈ ಸಿನಿಮಾ ಹಿಟ್ ಆಗಲಿದೆ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಸಾಂಗ್ ಮೂಲಕ ಮತ್ತಷ್ಟು ಕುತೂಹಲ ಹೆಚ್ಚಿಸಿರುವ ಪಠಾಣ್ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

- Advertisement -

Related news

error: Content is protected !!