Monday, June 15, 2026
spot_imgspot_img
spot_imgspot_img

ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಬ್ಲಾಸ್ಟ್- ಯುವಕನಿಗೆ ಗಂಭೀರ ಗಾಯ

- Advertisement -
- Advertisement -

ಪ್ಯಾಂಟ್ ಜೇಬಿನಲ್ಲಿ ಮೊಬೈಲ್ ಇಟ್ಟು ಕೊಂಡು ಬೈಕ್ ಚಲಾಯಿಸುವಾಗ ಮೊಬೈಲ್ ಬ್ಲಾಸ್ಟ್ ಆಗಿ, ಯುವಕನಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೊರಬದಲ್ಲಿ ನಡೆದಿದೆ.

ಸೊರಬ ತಾಲೂಕು ಕುಪ್ಪಗುಡ್ಡೆ ಗ್ರಾಮದ ಕೆರೆ ಬಳಿ ಘಟನೆ ನಡೆದಿದೆ. ತವನಂದಿ ಗ್ರಾಮದ ಶರತ್(22) ಎಂಬಾತ ಗಾಯಗೊಂಡವರು. ಶರತ್ ತವನಂದಿ ಗ್ರಾಮದಿಂದ ಕುಪ್ಪಗುಡ್ಡೆಗೆ ಹೋಗುವಾಗ ಕೆರೆಯ ಬಳಿ ಮೊಬೈಲ್ ಸ್ಟೋಟಗೊಂಡಿದೆ.

ಇದರಿಂದ ಯುವಕ ಗಾಬರಿಯಲ್ಲಿ ನಿಯಂತ್ರಣ ಕಳೆದು ಕೊಂಡು ಕೆರೆಗೆ ಬಿದ್ದಿದ್ದಾ‌ರೆ. ತಕ್ಷಣ ಅವರನ್ನು ಹಿಂಬದಿ ಬೈಕ್ ಸವಾರರು ಶರತ್ ನನ್ನು ಸೊರಬ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಶರತ್ ನ ಬಲ ತೂಡೆಗೆ ಗಾಯವಾಗಿದೆ. ಈ ಕುರಿತು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!