Wednesday, July 22, 2026
spot_imgspot_img
spot_imgspot_img

ಮೆಲ್ಕಾರ್ ಮಹಿಳಾ ಕಾಲೇಜು ವಾರ್ಷಿಕ ಕ್ರೀಡಾಕೂಟ

- Advertisement -
- Advertisement -

ಬಿ. ಸಿ.ರೋಡ್: ಮೆಲ್ಕಾರ್ ಮಹಿಳಾ ಪದವಿ ಪೂರ್ವ ಹಾಗೂ ಪದವಿ ಕಾಲೇಜು ಮಾರ್ನಬೈಲ್ ಇದರ
2022-23 ನೆ ಸಾಲಿನ ವಾರ್ಷಿಕ ಕ್ರೀಡಾಕೂಟ ಡಿ.23 ರಂದು ಕಾಲೇಜು ಕ್ರೀಡಾoಗಣದಲ್ಲಿ ನಡೆಯಿತು.

ಕ್ರೀಡಾ ಕೂಟವನ್ನು ಉದ್ಘಾಟಿಸಿದ ಸಜೀಪ ಮುನ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸಬೀನಾ ಮಾತನಾಡಿ ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಬೆಳವಣಿಗೆಗೆ ಕ್ರೀಡೆ ಪೂರಕವಾಗಿದ್ದು, ವ್ಯಕ್ತಿತ್ವ ವಿಕಸನಕ್ಕೆ ಸಹಕರಿಯಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಬಿ.ಕೆ. ಅಬ್ದುಲ್ ಲತೀಫ್ ಮಾತನಾಡಿ, ಕ್ರೀಡೆ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಿದ್ದು, ಓದಿನೊಂದಿಗೆ ಕ್ರೀಡೆ ಕೂಡ ಮುಖ್ಯ ಎಂದರು. ಉಪನ್ಯಾಸಕ ಅಬ್ದುಲ್ ಮಜೀದ್ ಎಸ್ ಕ್ರೀಡಾಕೂಟದ ನೇತೃತ್ವವಹಿಸಿದ್ದರು.

ವಿವಿಧ ಪಂದ್ಯಾಟಗಳ ವಿಜೇತರ ಪಟ್ಟಿಯನ್ನು ಉಪನ್ಯಾಸಕರಾದ ದಿವ್ಯಾ ಮತ್ತು ರಕ್ಷಿತಾ ವಾಚಿಸಿದರು. ವೇದಿಕೆಯಲ್ಲಿ ಉಪ ಪ್ರಾಂಶುಪಾಲೆ ಸುನೀತಾ ಪಿರೇರಾ, ಮಮತಾ ರಾವ್, ಕಲಾವತಿ ಕೆ, ವಿದ್ಯಾರ್ಥಿ ಪರಿಷತ್ತಿನ ನಾಯಕಿಯರಾದ ಸುಝುನಾ,ಫಾತಿಮಾ ಫರ್ವೀನ, ಫಿದಾನಹಿಮ, ಅವ್ವಮ್ಮ ಮುನೀಷ, ಉಪಸ್ಥಿತರಿದ್ದರು.

ಝುಬೈದ ಸಲ್ಹ ಸ್ವಾಗತಿಸಿ, ನಫೀಶತುಲ್ ಮಿಸ್ರಿಯ ಧನ್ಯವಾದವಿತ್ತರು. ಮರಿಯಮ್ ಜಸೀರ ಕಾರ್ಯಕ್ರಮ ನಿರ್ವಹಿಸಿದರು.

- Advertisement -

Related news

error: Content is protected !!