Friday, April 19, 2024
spot_imgspot_img
spot_imgspot_img

ಪುತ್ತೂರು: ತೆಂಗು ಬೆಳೆಗಾರರಿಗೆ ಸಂತಸದ ಸುದ್ದಿ; ದ.ಕ ತೆಂಗು ರೈತ ಉತ್ಪಾದಕರ ಸಂಸ್ಥೆಯಿಂದ ಹಲವು ಯೋಜನೆಗಳು ಜಾರಿ

- Advertisement -G L Acharya panikkar
- Advertisement -
vtv vitla
vtv vitla
vtv vitla

ಪುತ್ತೂರು: ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಸ್ಥೆಯ ಆಡಳಿತ ಮಂಡಳಿ ಇನ್ನೊಂದು ಹೊಸ ಹೆಜ್ಜೆಯನ್ನು ಮುಂದಿಟ್ಟಿದೆ.

ಸಂಸ್ಥೆಯ ವ್ಯಾಪ್ತಿಗೆ ಒಳಪಟ್ಟ 4 ಜಿಲ್ಲೆಗಳಾದ ದಕ್ಷಿಣಕನ್ನಡ, ಉಡುಪಿ, ಕೊಡಗು ಮತ್ತು ಕಾಸರಗೋಡು ಜಿಲ್ಲೆಯಲ್ಲಿರುವ ತೆಂಗಿನ ಮರ ಮತ್ತು ಅಡಿಕೆ ಮರ ಹತ್ತುವ ಕಾರ್ಮಿಕ ವರ್ಗದವರಿಗೆ ಅವರ ಕುಟುಂಬದ ಭವಿಷ್ಯದ ದೃಷ್ಟಿಯಿಂದ 25ಲಕ್ಷ ರೂಪಾಯಿವರೆಗೆ ವಿಮಾ ರಕ್ಷಣ ಯೋಜನೆ ಜಾರಿಗೊಳಿಸಿದೆ.

vtv vitla

ತೆಂಗಿನ ಕಾಯಿ ಮತ್ತು ತೆಂಗಿನ ಮರದ ಮೌಲ್ಯ ವರ್ದನ ಉತ್ಪಾದನೆಯ ಬೃಹತ್ ಯೋಜನೆಯನ್ನು ಈ ಸಂಸ್ಥೆ ಹಾಕಿಕೊಂಡಿದೆ. ಸಂಸ್ಥೆಯಲ್ಲಿ ಕೆಲವು ಆಯ್ದ ಕಾರ್ಮಿಕರಿಗೆ ಉದ್ಯೋಗ ನೀಡಲಾಗುವುದು.

ದ.ಕ ತೆಂಗು ರೈತ ಉತ್ಪಾದಕರ ಸಂಸ್ಥೆಯು ಈಗಾಗಲೇ ಪುತ್ತೂರು ತಾಲ್ಲೂಕಿನಲ್ಲಿ ಸುಮಾರು 8ಎಕ್ರೆ ಜಾಗವನ್ನು ಗುರುತಿಸಿ ಬೋಗ್ಯಕ್ಕೆ ಪಡೆದು ಉತ್ಪಾದನಾ ಕೇಂದ್ರದ ಕೆಲಸವನ್ನು ಈಗಾಗಲೇ ಆರಂಭಿಸಿದೆ.

ಇನ್ನೂ ಕೆಲವೇ ದಿನಗಳಲ್ಲಿ ಸಂಸ್ಥೆಯ ಸ್ಥಳೀಯ ಸಂಪನ್ಮೂಲ ಸಿಬ್ಬಂದಿಗಳ ಮೂಲಕ ನೋಂದಾಯಿಸಲ್ಪಟ್ಟ ರೈತರಿಂದ ಆಯಾಯಾ ತಾಲ್ಲೂಕಿನ ಹೋಬಳಿಗಳಲ್ಲಿ ತೆಂಗಿನ ಕಾಯಿ ಖರೀದಿಯನ್ನು ದರಗಳಲ್ಲಿ ಖರೀದಿಸಲಾಗುವುದು ಹಾಗೂ ಸಂಸ್ಥೆಯು ತೆಂಗಿನ ಮರಗಳಿಗೆ ವಿಶೇಷ ಮಾರುಕಟ್ಟೆ ದರದಿಂದ ಹೆಚ್ಚಿನ ರೀತಿಯ ಬೆಳೆ ವಿಮೆಯನ್ನು ನೀಡಲಾಗುವುದು.

ಸಂಸ್ಥೆಯು ಸುಳ್ಯ ತಾಲ್ಲೂಕಿನಲ್ಲಿ ಮಾಹಿತಿ ಕಛೇರಿ ತೆರೆಯಲಾಗಿದೆ ಇನ್ನೂ ಕೆಲವು ದಿನಗಳಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸಂಸ್ಥೆಯ ಮಾಹಿತಿ ಕೇಂದ್ರ ಕಛೇರಿಗಳನ್ನು ತೆರೆಯಲಾಗುವುದು ಎಂದು ಆಡಳಿತಮಂಡಳಿ ತಿಳಿಸಿದೆ.

ಸಂಸ್ಥೆಯು ಈಗಾಗಲೇ ಜಿಲ್ಲೆಯ 100ಕ್ಕೂ ರೈತರ ಮಕ್ಕಳಿಗೆ ಮಿಕ್ಕಿ ಉದ್ಯೋಗವನ್ನು ನೀಡಿದೆ. ಇನ್ನೂ 2 ವರ್ಷಗಳಲ್ಲಿ ಬಡ ರೈತಾಪಿ ವರ್ಗದ 3000 ಮಕ್ಕಳಿಗೆ ಉದ್ಯೋಗ ನೀಡುವ ಯೋಜನೆಯನ್ನು ಸಂಸ್ಥೆ ರೂಪಿಸಿದೆ.

vtv vitla
vtv vitla

ತೆಂಗಿನ ಮತ್ತು ಅಡಿಕೆ ಮರಗಳಿಗೆ ವಿಶೇಷ

ಪೋಷಕಾಂಶ ಹೊಂದಿರುವ ಗೊಬ್ಬರವನ್ನು ಸಬ್ಸಿಡಿ ರೂಪದಲ್ಲಿ ವಿತರಿಸಲಾಗುವುದು. 39 ವಿವಿಧ ತಳಿಯ ತೆಂಗಿನ ಸಸಿ ಗಳನ್ನು ಸಬ್ಸಿಡಿ ರೂಪದಲ್ಲಿ ರೈತರಿಗೆ ನೀಡಲಾಗುವುದು.

ರಾಜ್ಯಾದ್ಯಂತ ಹೋಬಳಿ ಮಟ್ಟದಲ್ಲಿ ಮಹಿಳಾ ಸಬಲಿಕರಣ ಯೋಜನೆಯ ಅಡಿಯಲ್ಲಿ ತೆಂಗು ರೈತರ ಮಹಿಳಾ ಉತ್ಪಾದನೆ ಸಂಸ್ಥೆ ರಚಿಸುವ ಯೋಜನೆ ಹೊಂದಿಕೊಂಡಿದೆ ಎಂದರು. ತೆಂಗು ರೈತರ ಸ್ವ ಸಹಾಯ ಗುಂಪುಗಳನ್ನು ರಚಿಸಿ ರೈತರಿಗೆ ಕೃಷಿ ಅಭಿವೃದ್ಧಿ ಯೋಜನೆ ನೀಡಲಾಗುವುದು.

vtv vitla
vtv vitla
vtv vitla
vtv vitla
- Advertisement -

Related news

error: Content is protected !!