Saturday, September 5, 2026
spot_imgspot_img
spot_imgspot_img

ಮಂಗಳೂರು: 800 ಬೀದಿನಾಯಿಗಳ ಅನ್ನಕ್ಕೆ ಸೀಮೆಎಣ್ಣೆ ಸುರಿದ ಮಹಿಳೆ

- Advertisement -
- Advertisement -

ಮಂಗಳೂರು: ಮಹಿಳೆಯೊಬ್ಬರು ಬೀದಿನಾಯಿಗಳಿಗೆ ಹಾಕಲೆಂದು ತಯಾರಿಸಿದ್ದ ಅನ್ನಕ್ಕೆ ಪಕ್ಕದ ಮನೆಯ ಮಹಿಳೆ ಸೀಮೆಎಣ್ಣೆ ಸುರಿದ ಅಮಾನವೀಯ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರಿನ ಬಳ್ಳಾಲ್‌ಭಾಗ್ ನಿವಾಸಿ ರಜನಿ ಶೆಟ್ಟಿ ಅವರು ಸುಮಾರು 800 ಬೀದಿನಾಯಿಗಳಿಗೆ 60 ಕೆಜಿ ಅಕ್ಕಿಯಿಂದ ಅನ್ನ ತಯಾರಿಸಿಟ್ಟಿದ್ದರು. ಇದಕ್ಕೆ ಪಕ್ಕದ ಮನೆಯ ಮಹಿಳೆ ಸೀಮೆಎಣ್ಣೆ ಸುರಿದಿದ್ದು, ಇದರಿಂದ ಬೇಸರವಾಗಿದೆ ಎಂದು ರಜನಿ ಶೆಟ್ಟಿ ತಿಳಿಸಿರುವುದಾಗಿ ವರದಿಯಾಗಿದೆ. ಇನ್ನು ಮುಂದೆ ಈ ರೀತಿ ಆಗದಿರಲೆಂದು ಮನೆಯ ಸುತ್ತ ಸಿಸಿಟಿವಿಯನ್ನೂ ಅಳವಡಿಸಿದ್ದಾರೆ.

ಬೀದಿನಾಯಿಗಳಿಗೆ ಉಣ ಬಡಿಸುವುದನ್ನು ತಮ್ಮ ಕಾಯಕವಾಗಿ ಮಾಡಿಕೊಂಡಿರುವ ಶ್ವಾನಪ್ರಿಯೆ ರಜನಿ ಶೆಟ್ಟಿ ಅವರು 38 ಬೀದಿನಾಯಿ, ಬೆಕ್ಕು, ಗಿಡುಗ, ಕಾಗೆಗಳಿಗೆ ಮನೆಯಲ್ಲೇ ಆಶ್ರಯ ನೀಡಿದ್ದಾರೆ. ಗಾಯಾಳು ಪ್ರಾಣಿಗಳ ಆರೈಕೆಯನ್ನೂ ಮಾಡುತ್ತಾರೆ. ನಾಯಿಗಳ ಬೊಗಳುವಿಕೆಯಿಂದ ಕಿರಿಕಿರಿಯುಂಟಾಗುತ್ತದೆ ಎಂದು ಸ್ಥಳೀಯ ಮಹಿಳೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

ಬೀದಿನಾಯಿಗಳ ರೋಧನೆ ನೋಡಿ ಮನಸ್ಸು ಕರಗಿ ಕಳೆದ ಎರಡೂವರೆ ದಶಕಗಳಿಂದ ಮೂಕ ಪ್ರಾಣಿಗಳಿಗೆ ಆಹಾರ ಹಾಕುತ್ತಾರೆ. ಪ್ರತಿದಿನ 800 ನಾಯಿಗಳಿಗೆ 60 ಕೆಜಿ ಅಕ್ಕಿ ಬೇಯಿಸಿ ಅನ್ನ ತಯಾರು ಮಾಡಿ, ಕೋಳಿ ತ್ಯಾಜ್ಯವನ್ನು ಸೇರಿಸಿ ಪ್ರಾಣಿಗಳಿಗೆ ನೀಡುತ್ತಾರೆ.

- Advertisement -

Related news

error: Content is protected !!