Thursday, September 3, 2026
spot_imgspot_img
spot_imgspot_img

WIM ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ-ಜಿಲ್ಲಾಧ್ಯಕ್ಷೆಯಾಗಿ ಶಿನೀರ ಬಾನು ಪುನರಾಯ್ಕೆ

- Advertisement -
- Advertisement -

ಬಂಟ್ವಾಳ, ಸೆ. 2: ವಿಮೆನ್ ಇಂಡಿಯಾ ಮೂವ್ಮೆಂಟ್ (WIM) ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಪ್ರತಿನಿಧಿ ಸಭೆ ಪಾಣೆಮಂಗಳೂರಿನ ಹೆಚ್.ಹೆಚ್. ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಿತು.ಜಿಲ್ಲಾಧ್ಯಕ್ಷೆ ಶಿನೀರ ಬಾನು ಧ್ವಜಾರೋಹಣ ನೆರವೇರಿಸುವ ಮೂಲಕ ಸಭೆಗೆ ಚಾಲನೆ ನೀಡಿದರು.

ಸಭೆಯಲ್ಲಿ 2024-2026ರ ಅವಧಿಯಲ್ಲಿ ಸಂಘಟನೆಯ ವತಿಯಿಂದ ನಡೆದ ಸಾಮಾಜಿಕ, ಮಹಿಳಾ ಸಬಲೀಕರಣ ಹಾಗೂ ಜನಪರ ಚಟುವಟಿಕೆಗಳ ವರದಿಯನ್ನು ಮಂಡಿಸಲಾಯಿತು.

ಮಹಿಳೆಯರ ಹಕ್ಕುಗಳ ರಕ್ಷಣೆ, ಸಾಮಾಜಿಕ ನ್ಯಾಯ ಹಾಗೂ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುವುದರೊಂದಿಗೆ ಸಂಘಟನೆಯನ್ನು ತಳಮಟ್ಟದಲ್ಲಿ ಮತ್ತಷ್ಟು ಬಲಪಡಿಸುವ ಅಗತ್ಯವಿದೆ ಎಂದು ಶಿನೀರ ಬಾನು ಹೇಳಿದರು.SDPI ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಎಸ್. ಅವರು ನಾಯಕತ್ವದ ಕುರಿತು ತರಬೇತಿ ನೀಡಿದರು. WIM ಕರ್ನಾಟಕ ರಾಜ್ಯ ಕಾರ್ಯದರ್ಶಿ ನಸ್ರಿಯ ಬೆಳ್ಳಾರೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಚುನಾವಣಾಧಿಕಾರಿಗಳಾದ ರಮ್ಲತ್ ಮಂಗಳೂರು ಹಾಗೂ ಝುಲೈಕ ಅವರ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಶಿನೀರ ಬಾನು ಅವರನ್ನು WIM ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷೆಯಾಗಿ ಪುನರಾಯ್ಕೆ ಮಾಡಲಾಯಿತು.ನೂತನ ಸಮಿತಿ: ಪ್ರಧಾನ ಕಾರ್ಯದರ್ಶಿಯಾಗಿ ಝರೀನಾ ಉಪ್ಪಿನಂಗಡಿ, ಉಪಾಧ್ಯಕ್ಷೆಯಾಗಿ ಝಹನ, ಕಾರ್ಯದರ್ಶಿಯಾಗಿ ನುಸೈಬ ಕಲ್ಲಡ್ಕ ಹಾಗೂ ಕೋಶಾಧಿಕಾರಿಯಾಗಿ ನೌರಿನ ಅಲಂಪಾಡಿ ಆಯ್ಕೆಯಾದರು.

ಸಮಿತಿ ಸದಸ್ಯೆಯರಾಗಿ ಶಮ ಉಜಿರೆ, ಝೈಬುನ್ನಿಸಾ ಬಿ.ಸಿ.ರೋಡ್, ಮರಿಯಮ್ಮ ಮೊಡಂತ್ಯಾರ್, ಗೌಸಿಯಾ ಪೊನ್ನೋಡಿ, ರುಬಿಯ ಬೆಳ್ತಂಗಡಿ, ಸನಾ ಸುಳ್ಯ, ಆಫ್ರಿನ್ ಬಂಟ್ವಾಳ ಹಾಗೂ ಮೆಹರು ಅಥೂರು ಆಯ್ಕೆಯಾದರು.

ಝಹನ ಅಕ್ಕರಂಗಡಿ ಸ್ವಾಗತಿಸಿದರು. ಮುರ್ಷಿದ ಹಾಗೂ ಮುಸ್ಕಾನ್ ಕಾರ್ಯಕ್ರಮ ನಿರೂಪಿಸಿದರು. ನೂತನ ಪ್ರಧಾನ ಕಾರ್ಯದರ್ಶಿ ಝರೀನಾ ಉಪ್ಪಿನಂಗಡಿ ವಂದಿಸಿದರು.

- Advertisement -

Related news

error: Content is protected !!