ಮುಂಬೈ: 3 ವರ್ಷದ ಪುಟ್ಟ ಮಗು ಮೇಲೆ ಕಾರು ಹರಿದ್ರೂ ಪವಾಡ ರೀತಿಯಲ್ಲಿ ಪಾರಾದ ಘಟನೆ ಮುಂಬೈನ ಮಲ್ವಾನಿ ಪ್ರದೇಶದಲ್ಲಿ ನಡೆದಿದೆ.
ಈ ಘಟನೆ ಸೆಪ್ಟೆಂಬರ್ 11 ರಂದು ನಡೆದಿದೆ. ಸದ್ಯ ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.ಮೂರು ವರ್ಷದ ಬಾಲಕ ಮನೆ ಮುಂದೆ ತನ್ನ ಪಾಡಿಗೆ ಆಟವಾಡುತ್ತಿದ್ದನು. ಈ ವೇಳೆ ಏಕಾಏಕಿ ಬಂದ ಕಾರು ಆತನ ಮೇಲೆಯೇ ಹರಿದಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
#WATCH Maharashtra: A car ran over a 3-year-old child while he was playing outside his house in Mumbai's Malvani area. (11.09.2020)
— ANI (@ANI) September 16, 2020
The child survived the accident and has been discharged from hospital. Police have registered a case against the driver. pic.twitter.com/rdI7xbzqpg
ಘಟನೆಯಿಂದ ಗಾಯಗೊಂಡ ಬಾಲಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚೇರಿಸಿಕೊಂಡಿದ್ದಾನೆ. ಅಲ್ಲದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಪ್ರಕರಣ ಸಂಬಂಧ ಕಾರು ಡ್ರೈವರ್ ವಿರುದ್ಧ ಕೇಸ್ ದಾಖಲಾಗಿದೆ.