Saturday, June 6, 2026
spot_imgspot_img
spot_imgspot_img

ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಮತ್ತೆ ಮೂವರಿಗೆ ನೋಟಿಸ್

- Advertisement -
- Advertisement -

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ ಮತ್ತೆ ಮೂವರಿಗೆ ನೋಟಿಸ್ ನೀಡಲಾಗಿದೆ.

ಕಾಂಗ್ರೆಸ್ ಮುಖಂಡ, ಕೆಪಿಸಿಸಿ ಸದಸ್ಯ ದೇವರಾಜ್ ಮಗ ಕಾರ್ಪೊರೇಟರ್ ಯುವರಾಜ್, ನಟ ಸಂತೋಷ್‌ಕುಮಾರ್ ಹಾಗೂ ನಟ, ನಿರೂಪಕ ಅಕುಲ್ ಬಾಲಾಜಿಗೆ ಸಿಸಿಬಿ ಪೊಲೀಸರು ವಾಟ್ಸಾಪ್ ಮೂಲಕ ನೋಟಿಸ್ ನೀಡಿದ್ದಾರೆ. ಜೊತೆಗೆ ನಾಳೆ ಬೆಳಗ್ಗೆ 10ಕ್ಕೆ ಸಿಸಿಬಿ ಎದುರು ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

ಸಿಸಿಬಿ ಪೊಲೀಸರಿಂದ ನೋಟಿಸ್ ಬಂದಿರುವ ಬಗ್ಗೆ ನಿರೂಪಕ ಅಕುಲ್ ಬಾಲಾಜಿ, ನನಗೆ ಸಿಸಿಬಿ ಪೊಲೀಸರಿಂದ ನೋಟೀಸ್ ‌ಬಂದಿದೆ. ನಾನು ಈಗ ಹೈದರಾಬಾದ್​ನಲ್ಲಿದ್ದೀನಿ, ಹೀಗಾಗಿ ನಾಳೆ ಬೆಳಿಗ್ಗೆ 10 ಘಂಟೆಗೆ ವಿಚಾರಣೆಗೆ ಹಾಜರಾಗ್ತಿನಿ ಎಂದರು.

ಡ್ರಗ್ ಪೆಡ್ಲರ್ ವೈಭವ್ ಜೈನ್ ಆಯೋಜಿಸಿದ್ದ ಪಾರ್ಟಿಯಲ್ಲಿ ಆರ್.ವಿ.ದೇವರಾಜ್ ಪುತ್ರ ಕಾರ್ಪೊರೇಟರ್ ಯುವರಾಜ್ ಪಾಲ್ಗೊಂಡಿದ್ದ ಎನ್ನುವ ಮಾಹಿತಿ ಲಭಿಸಿದೆ.

- Advertisement -

Related news

error: Content is protected !!