Monday, August 10, 2026
spot_imgspot_img
spot_imgspot_img

ಭಾರತೀಯ ನೌಕಾಪಡೆಯ ರೇಡಾರ್​ನಲ್ಲಿ ಚೀನಿ ನೌಕೆಯ ಚಲನವಲನಗಳು

- Advertisement -
- Advertisement -

ಚೀನಾದ ನೌಕೆಯೊಂದು ಹಿಂದೂ ಮಹಾಸಾಗರ ಪ್ರದೇಶದ ಭಾರತೀಯ ಜಲಗಡಿಯನ್ನು ಪ್ರವೇಶಿಸಿ ಬೇಹುಗಾರಿಕೆ ನಡೆಸಿರುವ ಆತಂಕಕಾರಿ ಸಂಗತಿ ಇದೀಗ ಬಹಿರಂಗಗೊಂಡಿದೆ. ಭಾರತೀಯ ನೌಕಾಪಡೆಯ ರೇಡಾರ್​ನಲ್ಲಿ ಚೀನಿ ನೌಕೆಯ ಚಲನವಲನಗಳು ಕಂಡುಬಂದಿವೆ.

ಭಾರತ ಸೇರಿದಂತೆ ವಿಶ್ವದ ಹಲವಾರು ವಿಖ್ಯಾತ ಕಂಪೆನಿಗಳ ಡಾಟಾ ಕದಿಯಲು ಹ್ಯಾಕಿಂಗ್​ ತಂತ್ರಜ್ಞಾನದ ಮೊರೆ ಹೋಗಿರುವ ಚೀನಾ ಇದೀಗ ಬೇಹುಗಾರಿಕೆ ನಡೆಸಲು ತನ್ನ ದೇಶದ ನೌಕೆಯನ್ನು ಭಾರತಕ್ಕೆ ಕಳುಹಿಸಿರುವುದು ಬೆಳಕಿಗೆ ಬಂದಿದೆ.

2019ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಸಮೀಪ ಚೀನಾದ ಸಂಶೋಧನಾ ನೌಕೆಯೊಂದು ಬಂದಿತ್ತು. ನಂತರ ಕರಾವಳಿ ರಕ್ಷಣಾ ಪಡೆ ಅದನ್ನು ಹಿಂದಕ್ಕೆ ಕಳುಹಿಸಿತ್ತು. ಆದರೆ ಇದೀಗ ಮತ್ತೆ ಅದೇ ಕುತಂತ್ರ ಬುದ್ಧಿ ತೋರಿದ್ದಾರೆ ಚೀನಿಯರು.


ಚೀನಾದ ಸಂಶೋಧನೆ ಮತ್ತು ಸರ್ವೆ ನೌಕೆ ಯೌನ್ ವಾಂಗ್ ಹಿಂದೂ ಮಹಾಸಾಗರದ ಮಲಕಾ ಜಲಸಂಧಿ ಮಾರ್ಗವಾಗಿ ಭಾರತೀಯ ಜಲಗಡಿಯನ್ನು ಇತ್ತೀಚೆಗೆ ಪ್ರವೇಶಿಸಿ ಕೆಲವು ದಿನಗಳ ಕಾಲ ಅಲ್ಲಿಯೇ ನೆಲೆಸಿರುವ ಬಗ್ಗೆ ಭಾರತೀಯ ಸೇನೆಗೆ ತಿಳಿದುಬಂದಿದೆ.

- Advertisement -

Related news

error: Content is protected !!