- Advertisement -
- Advertisement -
ಭಾರತ-ಚೀನಾ ನಡುವೆ ಗಡಿಯಲ್ಲಿ ಉದ್ವಿಗ್ನತೆ ದಿನೇದಿನೇ ಹೆಚ್ಚಾಗುತ್ತಿರುವ ಬೆನ್ನಲ್ಲೇ ಲಡಾಖ್ ವಾಯುಪ್ರದೇಶದಲ್ಲಿ ರಫೇಲ್ ಯುದ್ಧವಿಮಾನಗಳು ಹಾರಾಟ ನಡೆಸಿವೆ.
ಕಳೆದ ಐದು ತಿಂಗಳಿಂದ ಭಾರತ ಹಾಗೂ ಚೀನಾ ಮಧ್ಯೆ ಗಡಿ ಬಿಕ್ಕಟು ಉಂಟಾಗಿದೆ. ಇದರ ನಡುವೆಯೇ ರಫೇಲ್ ಯುದ್ಧ ವಿಮಾನಗಳು ಲಡಾಖ್ನಲ್ಲಿ ಹಾರಾಟ ನಡೆಸುವ ಮೂಲಕ ಭಾರತ ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ ಅನ್ನೋ ಸ್ಪಷ್ಟ ಸಂದೇಶವನ್ನ ಚೀನಾ ರಾಷ್ಟ್ರಕ್ಕೆ ರವಾನಿಸಿದೆ.
ಕಳೆದ ಜುಲೈನಲ್ಲಿ ಫ್ರಾನ್ಸ್ನಿಂದ ಬಂದಿಳಿದ ಐದು ರಫೇಲ್ ಜೆಟ್ಗಳನ್ನ, ಸೆಪ್ಟೆಂಬರ್ 10ರಂದು ಸೇನೆಗೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳಲಾಗಿದೆ.
ಇದರ ಬೆನ್ನಲ್ಲೇ ಇತ್ತೀಚೆಗೆ ಪೈಲೆಟ್ಗಳು ಅಂಬಾಲಾ ವಾಯುನೆಲೆಯಿಂದ ಲಡಾಖ್ವರೆಗೂ ಹಾರಾಟ ನಡೆಸಿ, ರಫೇಲ್ ವಿಮಾನಗಳ ಕಾರ್ಯಾಚರಣೆಗೆ ಅಲ್ಲಿನ ವಾತಾವರಣದ ಪರಿಚಯ ಮಾಡಿಕೊಂಡಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
- Advertisement -