Saturday, June 28, 2025
spot_imgspot_img
spot_imgspot_img

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಕಾಮುಕ ಅರೆಸ್ಟ್

- Advertisement -
- Advertisement -

ಮಲಪ್ಪುರಂ: ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಯುವಕ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿಗೆ ಕೇರಳದ ಕಾಪ್ ತೆಲಕ್ಕಾಡ್ ಮೂಲದ ಮುದಶೀರ್‍ ಎಂಬಾತ ಸಾಮಾಜಿಕ ಜಾಲತಾಣ ಮೂಲಕ ವಿದ್ಯಾರ್ಥಿನಿಗೆ ಪರಿಚಯವಾಗಿದ್ದ, ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಂತ್ರಸ್ಥ ಬಾಲಕಿ ಈ ಬಗ್ಗೆ ಮೊದಲು ಶಾಲೆಯಲ್ಲಿ ಶಿಕ್ಷಕರಿಗೆ ಮಾಹಿತಿ ನೀಡಿದ್ದಾಳೆ. ಆ ಬಳಿಕ ಪೋಷಕರ ಸಮ್ಮುಖದಲ್ಲಿ ಮೇಲತ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಫೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರು ಬಂಧಿಸಿದ್ದಾರೆ.

ಈತನ ಈ ಮೊದಲೇ ಇಂತಹದ್ದೇ ಪ್ರಕರಣದಲ್ಲಿ ಸಿಕ್ಕಿ ಬಿದ್ದು ಜೈಲು ಸೇರಿದ್ದ. ಆ ಬಳಿಕ ಜಾಮೀನು ಮೂಲಕ ಹೊರಬಂದಿದ್ದ. ಆದರೆ ಈ ಮತ್ತೆ ಬಾಲ ಬಿಚ್ಚಿ ಪೊಲೀಸರ ಅತಿಥಿಯಾಗಿದ್ದಾನೆ.

- Advertisement -

Related news

error: Content is protected !!