Sunday, June 29, 2025
spot_imgspot_img
spot_imgspot_img

ಉಳ್ಳಾಲ : ಮಹಿಳೆಯನ್ನು ಚೂರಿಯಿಂದ ಇರಿದು ಕೊಲೆ

- Advertisement -
- Advertisement -
vtv vitla

ಉಳ್ಳಾಲ: ಮಹಿಳೆಯನ್ನು ಚೂರಿಯಿಂದ ಇರಿದು ಹತ್ಯೆ ನಡೆಸಿರುವ ಘಟನೆ ಉಳ್ಳಾಲದ ಕೋಟೆಪುರ ಬಸ್ ನಿಲ್ದಾಣದ ಸಮೀಪ ನಡೆದಿದೆ.

ದೆಹಲಿ ಮೂಲದ 35-40 ರ ಹರೆಯದ ಮಹಿಳೆ ಹತ್ಯೆ ನಡೆದಿದೆ. ಈಕೆ ಜತೆಗಿದ್ದ ಅದೇ ಊರಿನ ನಯೀಮ್ (35) ಎಂಬಾತ ತಲೆಮರೆಸಿಕೊಂಡಿದ್ದಾನೆ. ಎರಡು ದಿನಗಳ ಹಿಂದೆ ಕೋಟೆಪುರಕ್ಕೆ ಬಂದಿದ್ದ ಜೋಡಿ, ಸ್ಥಳೀಯ ಸೆಲೂನ್ ಮಾಲೀಕರ ಮೂಲಕ ಬಾಡಿಗೆ ಮನೆಯನ್ನು ಸಂಪರ್ಕಿಸಿ, ಹಮೀದ್ ಎಂಬವರ ಬಾಡಿಗೆ ಮನೆಯನ್ನು ಪಡೆದುಕೊಂಡಿದ್ದರು. ಮನೆಗೆ ಬರುವಾಗ ಬಟ್ಟೆ ವ್ಯಾಪಾರ ನಡೆಸುವವರು ಎಂದು ತಿಳಿಸಿದ್ದು , ಇನ್ನೇನು ಬಟ್ಟೆಗಳು ಬರಬೇಕಿದೆ ಎಂದು ತಿಳಿಸಿ ಮನೆಯಲ್ಲಿದ್ದರು.

ಸಂಜೆ ವೇಳೆ ಇಬ್ಬರೂ ಮನೆಯಿಂದ ಹೊರಬಾರದೇ ಇರುವುದನ್ನು ಗಮನಿಸಿ ಯುವಕನೋರ್ವ ಮನೆಯನ್ನು ಗಮನಿಸಿದಾಗ ಶೌಚಾಲಯದೊಳಕ್ಕೆ ಮಹಿಳೆ ಮೃತದೇಹ ಚೂರಿಯಿಂದ ಇರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

- Advertisement -

Related news

error: Content is protected !!