Monday, June 15, 2026
spot_imgspot_img
spot_imgspot_img

ಸುರತ್ಕಲ್‌: ಅಕ್ರಮ ಮರಳು ದಾಸ್ತಾನು; 250 ಲೋಡ್ ಮರಳು ಪೊಲೀಸರ ವಶಕ್ಕೆ

- Advertisement -
- Advertisement -
vtv vitla

ಸುರತ್ಕಲ್‌ : ಅಕ್ರಮವಾಗಿ ದಾಸ್ತಾನು ಮಾಡಿದ್ದ 250ಲೋಡ್‌ ಮರಳನ್ನು ಸುರತ್ಕಲ್‌ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಜತೆ ಕಾರ್ಯಾಚರಣೆ ನಡೆಸಿರುವ ಪೊಲೀಸರು ಮುಂಚೂರು ಗ್ರಾಮದಲ್ಲಿ 100 ಲೋಡ್, ಚೆಳ್ಯಾರು ಗ್ರಾಮದಲ್ಲಿ 150 ಲೋಡ್ ಮರಳನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಕ್ರಮವಾಗಿ ದಾಸ್ತಾನಿರಿಸಿದ್ದ ಮರಳಿನ ದರ 35 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಮಳೆಗಾಲದಲ್ಲಿ ಹೆಚ್ಚಿನ ಹಣ ಮಾಡುವ ಉದ್ದೇಶದಿಂದ ಕಾನೂನು ಉಲ್ಲಂಘಿಸಿ ಮರಳು ದಾಸ್ತಾನು ಮಾಡಲಾಗಿತ್ತು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ಮಾಡಿ, ಮರಳನ್ನು ವಶಕ್ಕೆ ಪಡೆದಿದ್ದಾರೆ. ಮರಳು ದಾಸ್ತಾನು ಮಾಡಲು ಜಾಗ ನೀಡಿದ್ದ ಭೂ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಸುರತ್ಕಲ್ ಪೊಲೀಸರು‌, ಮರಳು ಯಾರಿಗೆ ಸೇರಿದ್ದು ಎಂಬ ಬಗ್ಗೆ ತನಿಖೆ ಆರಂಭಿಸಿದ್ದಾರೆ.

- Advertisement -

Related news

error: Content is protected !!