Monday, June 15, 2026
spot_imgspot_img
spot_imgspot_img

ಹಸುವಿನ ರುಂಡವನ್ನು ಕಡಿದು ನದಿಗೆ ಎಸೆದ ದುಷ್ಕರ್ಮಿಗಳು..!!

- Advertisement -
- Advertisement -

ಕಿಡಿಗೇಡಿಗಳು ಹಸುವಿನ ಕತ್ತನ್ನು ಕಡಿದು ಬಳಿಕ ರುಂಡವನ್ನು ತುಂಗಾ ನದಿಗೆ ಎಸೆದು ಪರಾರಿ ಆಗಿರುವ ಘಟನೆ ತೀರ್ಥಹಳ್ಳಿಯ ಚಕ್ರತೀರ್ಥದಲ್ಲಿ ನಡೆದಿದೆ.

ಚಕ್ರತೀರ್ಥದಲ್ಲಿ ಶಂಖ, ಚಕ್ರ, ಗದಾ, ಪದ್ಮ ಎಂಬ ಪವಿತ್ರ ತೀರ್ಥಗಳ ಸಂಗಮ ಸ್ಥಳವಾಗಿದೆ. ಸ್ಥಳೀಯರು ಸ್ನಾನ ಮಾಡಲು ಹೊಳೆಗೆ ಇಳಿದಾಗ ವಿಷಯ ಬೆಳಕಿಗೆ ಬಂದಿದೆ. ದನದ ರುಂಡವನ್ನು ಬಿಟ್ಟು ಮಾಂಸ ತೆಗೆದುಕೊಂಡು ಹೋಗಲಾಗಿದೆ. ಇದು ತೀರ್ಥಹಳ್ಳಿ ಪೊಲೀಸರ ವೈಫಲ್ಯ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

ಈ ಹಿಂದೆಯೂ ಹಸುಗಳ ಹತ್ಯೆ ನಡೆದಿತ್ತು. ಶಿವಮೊಗ್ಗದ ಸೂಳೆಬೈಲಿನಲ್ಲಿ ಅಕ್ರಮ ಕಸಾಯಿ ಖಾನೆ ಶೆಡ್‌ ನಿರ್ಮಿಸಿಕೊಂಡು ಮಾಂಸಕ್ಕಾಗಿ ಹಸುಗಳ ಹತ್ಯೆ ಮಾಡಲಾಗಿತ್ತು. ಪೊಲೀಸರು ದಾಳಿಗೂ ಮುನ್ನ 7 ಹಸುಗಳ ಮಾರಣಹೋಮ ನಡೆದಿತ್ತು. ಈ ವಿಚಾರ ತಿಳಿದ ಶಿವಮೊಗ್ಗ ಮಹಾನಗರ ಪಾಲಿಕೆ ಅಧಿಕಾರಿಗಳು ಅಕ್ರಮ ಶೆಡ್‌ ಅನ್ನು ನೆಲಸಮ ಮಾಡಿದ್ದರು.

- Advertisement -

Related news

error: Content is protected !!