Sunday, June 29, 2025
spot_imgspot_img
spot_imgspot_img

ವಿಟ್ಲ : (ಎ.2) ಕಲಾತಪಸ್ವಿ ಕೋಚಿಂಗ್ ಸೆಂಟರ್ ಶುಭಾರಂಭ

- Advertisement -
- Advertisement -

ಕಳೆದ ಕೆಲವು ತಿಂಗಳ ಹಿಂದಷ್ಟೇ ಆರಂಭವಾದ ಕಲಾತಪಸ್ವಿ ಸಾಂಸ್ಕೃತಿಕ ತಂಡ ಅನೇಕ ಕಲಾಭಿಮಾನಿಗಳ ಬೆಂಬಲದಿಂದ ಒಂದೊಂದೇ ಯಶಸ್ವಿ ಹೆಜ್ಜೆಗಳನ್ನು ಇಡುತ್ತಾ ಮುಂದೆ ಸಾಗುತ್ತಿದೆ.

ಸಾಂಸ್ಕೃತಿಕ ಕಾರ್ಯಕ್ರಮ, ಸೇವಾನಿಧಿ ವಿತರಣೆಯ ಮೂಲಕ ಅನೇಕ ಮನಸುಗಳನ್ನು ಗೆದ್ದಿರುವ ಕಲಾ ತಪಸ್ವಿ ಸಾಂಸ್ಕೃತಿಕ ತಂಡವು ಇನ್ನೊಂದು ಹೊಸ ಹೆಜ್ಜೆಯನ್ನು ಇಡಲು ಮುಂದಾಗಿದೆ. ಅದೇ “ಕಲಾತಪಸ್ವಿ ಕೋಚಿಂಗ್ ಸೆಂಟರ್ “. ಇಲ್ಲಿ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ಪಿ.ಯು. ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಕಲಿಕೆಗೆ ಬೇಕಾಗುವ ವಿಷಯಗಳನ್ನು ಕಳುಹಿಸಿಕೊಡಲಾಗುವುದು.

ಕಲಾತಪಸ್ವಿ ಕೋಚಿಂಗ್ ಸೆಂಟರ್ ಇದೇ ಬರುವ ದಿನಾಂಕ 02/04/23 ನೇ ಆದಿತ್ಯವಾರದಂದು ಕಾರ್ಯಡಿ-ಕಂಬಳಬೆಟ್ಟು ಇಲ್ಲಿನ ಜನಪ್ರಸಿದ್ಧ ಕಟ್ಟಡದಲ್ಲಿ ಉದ್ಘಾಟನೆಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :ಜೈದೀಪ್ ಅಮೈ 7090615880

- Advertisement -

Related news

error: Content is protected !!