Tuesday, April 30, 2024
spot_imgspot_img
spot_imgspot_img

ಏಪ್ರಿಲ್ ಫೂಲ್‌ ನ್ಯೂಸ್‌ ಇದು..! – ತಮಾಷೆಗಾಗಿ

- Advertisement -G L Acharya panikkar
- Advertisement -

ನಗು ಎಲ್ಲ ದುಃಖವನ್ನು ಮರೆಸುವ ಶಕ್ತಿ ಹೊಂದಿದೆ. ನಗುವಿನಿಂದ ರೋಗ ಗುಣವಾಗುತ್ತದೆ. ಇಂದಿನ ಒತ್ತಡದ ಜೀವನದಲ್ಲಿ ನಗುವಿಗೂ ಸಮಯವಿಲ್ಲ ಎನ್ನುವಂತಾಗಿದೆ. ಹಾಗಾಗಿ ಅನೇಕರು ಲಾಫಿಂಗ್ ಕ್ಲಬ್ ಗೆ ಸೇರಿಕೊಂಡು ಸ್ವಲ್ಪ ಹೊತ್ತು ನಕ್ಕು ಬರುತ್ತಾರೆ. ಎಲ್ಲರೂ ನಗ್ತಿದ್ದರೆ ನಮಗೆ ಅವರನ್ನು ನೋಡಿಯೇ ನಗು ಬಂದಿರುತ್ತದೆ. ಆದ್ರೆ ಕೃತಕ ನಗುವಿನಿಂದ ಪ್ರಯೋಜನವಿಲ್ಲ. ನಗು ಮನಸ್ಸಿನಿಂದ ಬರ್ಬೇಕು. ವರ್ಷದಲ್ಲಿ ಒಮ್ಮೆ ನಮಗೆ ಮನಸ್ಸು ಬಿಚ್ಚಿ ನಗುವ ಅವಕಾಶ ಸಿಗುತ್ತದೆ. ಅದೇ ಮೂರ್ಖರ ದಿನ. ಎಲ್ಲರಿಗೂ ಗೊತ್ತಿರುವಂತೆ ಏಪ್ರಿಲ್ ಒಂದರಂದು ಮೂರ್ಖರ ದಿನವನ್ನು ಆಚರಿಸಲಾಗುತ್ತದೆ.

ಸ್ಕೂಲು, ಕಾಲೇಜು, ಕಚೇರಿ, ಮನೆ ಸೇರಿದಂತೆ ಎಲ್ಲ ಕಡೆ ಏಪ್ರಿಲ್ ಒಂದರಂದು ಜನರು ತಮ್ಮವರನ್ನು ಮೂರ್ಖರನ್ನಾಗಿ ಮಾಡುವ ಪ್ರಯತ್ನ ನಡೆಸ್ತಾರೆ. ನಂತರ ಏಪ್ರಿಲ್ ಫೂಲ್ ಎಂದು ಛೇಡಿಸ್ತಾರೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಮೂರ್ಖರ ದಿನದಲ್ಲಿ ಖುಷಿಯಿಂದ ಪಾಲ್ಗೊಳ್ಳುತ್ತಾರೆ. ಮೂರ್ಖರ ದಿನದಂದು ಜನರನ್ನು ಹೇಗೆ ಫೂಲ್ ಮಾಡಿದೆ ಎಂದು ಮಾತನಾಡ್ತಾ, ಅದನ್ನು ನೆನಪು ಮಾಡ್ತಾ ಆ ದಿನವನ್ನು ಎಂಜಾಯ್ ಮಾಡ್ತಾರೆ.

ಆದರೆ ಮೂರ್ಖರ ಈ ದಿನವನ್ನು ಏಕೆ ಆಚರಿಸಲಾಗುತ್ತದೆ?
ಏಪ್ರಿಲ್ ಒಂದನೇ ತಾರೀಕಿನಂದು ಮೂರ್ಖರ ದಿನವನ್ನು ಆಚರಿಲಾಗುತ್ತದೆ. ಆದರೆ ಇದು ಯಾವಾಗ ಬಂತು ಎಂಬುದನ್ನು ನೋಡಲು ಹೋದ್ರೆ 1381ರಲ್ಲಿ ಎಂಬುದು ಗೊತ್ತಾಗುತ್ತದೆ. 1381ರಲ್ಲಿ ಮೊದಲ ಬಾರಿಗೆ ಏಪ್ರಿಲ್ 1ರಂದು ಮೂರ್ಖರ ದಿನವನ್ನು ಆಚರಿಸಲಾಯಿತು ಎಂದು ನಂಬಲಾಗಿದೆ. ಇದರ ಹಿಂದೆ ಒಂದು ತಮಾಷೆಯ ಕಥೆಯಿದೆ. ಇಂಗ್ಲೆಂಡ್‌ನ ರಾಜ ರಿಚರ್ಡ್ II (Richard II) ಮತ್ತು ಬೊಹೆಮಿಯಾದ ರಾಣಿ ಅನ್ನಿ (Anne, Queen Of Bohemia) ಅವರು ನಿಶ್ಚಿತಾರ್ಥ ಮಾಡಿಕೊಳ್ಳುವ ಘೋಷಣೆ ಮಾಡಿದ್ರು.

ಮಾರ್ಚ್ 32, 1381 ರಂದು ನಿಶ್ಚಿತಾರ್ಥ ನಡೆಯಲಿದೆ ಎಂದು ಅವರು ಹೇಳಿದ್ದರು. ಈ ಘೋಷಣೆಯಿಂದ ಸಾರ್ವಜನಿಕರು ತುಂಬಾ ಸಂತೋಷಗೊಂಡರು. ಈ ಖುಷಿಯನ್ನು ಸಂಭ್ರಮಿಸಲು ಶುರು ಮಾಡಿದ್ದರು. ಆದರೆ ನಂತರ ಅವರಿಗೆ ಅರಿವಾಯ್ತು ಮಾರ್ಚ್ ನಲ್ಲಿ 32ನೇ ತಾರೀಕು ಇರುವುದಿಲ್ಲವೆಂದು. ಮಾರ್ಚ್ 31ನ್ನು ನಂಬಿ ನಾವು ಮೂರ್ಖರಾಗಿದ್ದೇವೆ ಎಂಬುದು ಅವರ ಅರಿವಿಗೆ ಬಂತು. ಅಂದಿನಿಂದ ಜನರು ಪ್ರತಿ ವರ್ಷ ಏಪ್ರಿಲ್ 1 ಅನ್ನು ಮೂರ್ಖರ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿದರು ಎಂದು ನಂಬಲಾಗಿದೆ.

- Advertisement -

Related news

error: Content is protected !!