Sunday, June 29, 2025
spot_imgspot_img
spot_imgspot_img

ಪುತ್ತೂರು : ಏ.27ರಂದು ನೆಟ್ಟಾರುರವರ ಕನಸಿನ ಮನೆ ’ಪ್ರವೀಣ್ ನಿಲಯ’ ಗೃಹ ಪ್ರವೇಶಕ್ಕೆ ಸಿದ್ದ

- Advertisement -
- Advertisement -
vtv vitla

ಪುತ್ತೂರು : ಸಮಾಜ ಘಾತುಕ ಶಕ್ತಿಗಳ ಕುತಂತ್ರಕ್ಕೆ ಬಲಿಯಾದ ದಿವಂಗತ ಪ್ರವೀಣ್ ನೆಟ್ಟಾರು ಅವರ ಕನಸಿನ ಮನೆ ಪ್ರವೀಣ್ ನಿಲಯದ ಗೃಹ ಪ್ರವೇಶಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಏಪ್ರಿಲ್ 27ಕ್ಕೆ ಗುರುವಾರ ಬೆಳ್ಳಾರೆಯ ನೆಟ್ಟಾರಿನಲ್ಲಿ ಗೃಹ ಪ್ರವೇಶ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಲಾಗಿದೆ.

ಶ್ರೀಗಣಪತಿ ಹೋಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯೊಂದಿಗೆ ಗೃಹ ಪ್ರವೇಶ ನೆರವೇರಲಿದೆ. ಇದೇ ವೇಳೆ ಬೆಳಗ್ಗೆ 11 ಗಂಟೆಗೆ ಪುತ್ತೂರು ಜಗದೀಶ ಆಚಾರ್ಯ ಮತ್ತು ಬಳಗದವರಿಂದ ಭಜನಾ ಸಂಕೀರ್ತನೆ ಹಾಗೂ ಅದೇ ದಿನ ರಾತ್ರಿ 7 ರಿಂದ ಶ್ರೀ ಕಲ್ಲುರ್ಟಿ ದೈವದ ನೇಮೋತ್ಸವವೂ ನಡೆಯಲಿದೆ ಎಂದು ತಿಳಿಸಲಾಗಿದೆ.

ಪ್ರವೀಣ್‌ ನೆಟ್ಟಾರು ಹತ್ಯೆಯ ಬಳಿಕ ನಳಿನ್‌ ಕುಮಾರ್‌ರವರು ರಾಜ್ಯ ಬಿಜೆಪಿ ವತಿಯಿಂದಲೇ ಮನೆ ನಿರ್ಮಿಸಿಕೊಡುವುದಾಗಿ ಹೇಳಿದ್ದರು. ಅದರಂತೆ ಪ್ರವೀಣ್‌ ಕುಟುಂಬ ವಾಸವಿದ್ದ ಜಾಗದಲ್ಲೇ 2500 ಚದರಡಿ ವಿಸ್ತೀರ್ಣದಲ್ಲಿ ಸುಂದರ ಮನೆ ಬಹುತೇಕ ಪೂರ್ಣಗೊಂಡು ಗೃಹಪ್ರವೇಶಕ್ಕೆ ಸಿದ್ಧಗೊಂಡಿದೆ.

ಆದರೆ ಚುನಾವಣೆ ಸಂದರ್ಭದಲ್ಲಿ ಗೃಹ ಪ್ರವೇಶ ಮಾಡುತ್ತಿರುವುದರಿಂದ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡಲು ಸಾಧ್ಯವಾಗಲ್ಲ. ಇಲ್ಲದೇ ಇರುತ್ತಿದ್ದರೆ, ಬಿಜೆಪಿ ರಾಜ್ಯಾಧ್ಯಕ್ಷರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಮಾಡುವ ಸಾಧ್ಯತೆಗಳಿದ್ದವು.

- Advertisement -

Related news

error: Content is protected !!