Thursday, June 18, 2026
spot_imgspot_img
spot_imgspot_img

ಅಶೋಕ್ ಕುಮಾರ್ ರೈ ನಾಮಪತ್ರ ಸಲ್ಲಿಕೆ ಹಿನ್ನಲೆ ನಗರ ಯುವ ಕಾಂಗ್ರೇಸ್ ಪುತ್ತೂರು ಬ್ಲಾಕ್ ಚುನಾವಣಾ ಪೂರ್ವಭಾವಿ ಸಭೆ

- Advertisement -
- Advertisement -

ಅಶೋಕ್ ಕುಮಾರ್ ರೈ ಗೆಲುವಿನೊಂದಿಗೆ ಪುತ್ತೂರಿನಲ್ಲಿ ಮತ್ತೊಮ್ಮೆ ಕಾಂಗ್ರೇಸ್ ಬಾವುಟ ಹಾರಿಸುತ್ತೇವೆ: ಹೇಮನಾಥ ಶೆಟ್ಟಿ ಕಾವು

ನಗರ ಯುವ ಕಾಂಗ್ರೇಸ್ ಪುತ್ತೂರು ಬ್ಲಾಕ್ ಚುನಾವಣಾ ಪೂರ್ವಭಾವಿ ಸಭೆ ನಡೆಯಿತು. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗೇಸ್ ಅಭ್ಯರ್ಥಿಯಾಗಿ ಅಶೋಕ್ ಕುಮಾರ್ ರೈ ಸ್ಪರ್ಧಿಸುತ್ತಿದ್ದು ನಾಳೆ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನಲೆ ಇಂದು ನಗರ ಯುವ ಕಾಂಗ್ರೇಸ್ ಪುತ್ತೂರು ಬ್ಲಾಕ್ ಚುನಾವಣಾ ಪೂರ್ವಭಾವಿ ಸಭೆ ನಡೆಯಿತು.

ಭಿನ್ನಮತ ಮರೆತು ಒಂದಾದ ಕಾಂಗ್ರೇಸ್ ನಾಯಕರು ಈ ಸಭೆಯಲ್ಲಿ ತಮ್ಮ ಹೆಚ್ಚಿನ ಬೆಂಬಲ ಸೂಚಿಸಿದರು. ಸಭೆಯಲ್ಲಿ ಹೇಮನಾಥ ಶೆಟ್ಟಿ ಕಾವು ಮಾತನಾಡಿ ಅಶೋಕ್ ಕುಮಾರ್ ರೈ ಗೆಲುವಿನೊಂದಿಗೆ ಪುತ್ತೂರಿನಲ್ಲಿ ಮತ್ತೊಮ್ಮೆ ಕಾಂಗ್ರೇಸ್ ಬಾವುಟ ಹಾರಿಸುತ್ತೇವೆ ಎಂದು ಸಂಪೂರ್ಣ ಬೆಂಬಲ ಸೂಚಿಸಿದರು. ಬಳಿಕ ಕಾಂಗ್ರೇಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಮಾತನಾಡಿ ಹೇಮನಾಥ ಶೆಟ್ಟಿ ಹಾಗೂ ಪಕ್ಷದ ಮುಖಂಡರ ಬೆಂಬಲದಿಂದ ಇನ್ನಷ್ಟು ಶಕ್ತಿ ಬಂದಿದೆ. ಎದುರಾಳಿ ಯಾಏ ಆದರೂ ಈ ಬಾರಿ ಕಾಂಗ್ರೇಸ್ ಗೆಲುವು ಶತಸಿದ್ದ ಎಂದು ಹೇಳಿದರು.

ಸಭೆಯಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಡಾ.ರಾಜಾರಾಮ್, ಪುತ್ತೂರು ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ್, ಮಹಮ್ಮದ್ ಆಲಿ, ಪ್ರಸನ್ನ ಕುಮಾರ್ ಸಿಝ್ಲರ್, ಅನಿತಾ ಹೇಮಾನಾಥ ಶೆಟ್ಟಿ, ಶ್ರೀಪ್ರಸಾದ್ ಪಾಣಾಜೆ, ಶಕುರ್, ಮುರಳೀಧರ ರೈ ಮಠಂತ ಬೆಟ್ಟು ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!