Tuesday, June 9, 2026
spot_imgspot_img
spot_imgspot_img

ಮಂಗಳೂರು: ಅಪರಿಚಿತ ವ್ಯಕ್ತಿಯ ಶವ ಪತ್ತೆ..! ಗುರುತು ಪತ್ತೆಹಚ್ಚುವಂತೆ ಮನವಿ

- Advertisement -
- Advertisement -

ಮಂಗಳೂರು: ರೈಲ್ವೇ ಹಳಿಯ ಪಕ್ಕದಲ್ಲೇ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾದ ಘಟನೆ ನಡೆದಿದೆ. ಪಣಂಬೂರಿನ ಬೀಚ್‌ ರೋಡ್‌ ಲೆವೆಲ್‌ ಕ್ರಾಸ್‌ನಿಂದ ಎಂಸಿಎಫ್‌ಗೆ ಹೋಗುವ ರೈಲ್ವೇ ಹಳಿಯ ಎನ್‌ಎಂಪಿಟಿ ಕಂಪೌಂಡ್‌ಗೆ ತಾಗಿಕೊಂಡು ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದಾಗಿ ತಿಳಿದುಬಂದಿದೆ.

ಬಿಸಿಲ ಬೇಗೆಗೆ ಅಥವಾ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಪಣಂಬೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು ವಾರೀಸುದಾರರು ಗುರುತು ಪತ್ತೆ ಹಚ್ಚುವಂತೆ ಕೋರಿದ್ದಾರೆ.

ಮೃತಪಟ್ಟ ವ್ಯಕ್ತಿಯ ಪ್ರಾಯ 45 ರಿಂದ 50 ವರ್ಷ ಆಗಿರಬಹುದು. ಕಪ್ಪು ಬಣ್ಣದ ಶರ್ಟ್‌, ನೀಲಿ ಬಣ್ಣದ ಜೀನ್ಸ್‌ ಪ್ಯಾಂಟ್ ಧರಿಸಿದ್ದಾರೆ, ಕಪ್ಪು, ಬಿಳಿ ಮಿಶ್ರಿತ ಗಡ್ಡ, ಎತ್ತರ ೫ ಐಡಿ ೬ ಇಂಚು ಎತ್ತರ ಇದ್ದಾರೆ. ಗುರುತು ಪತ್ತೆಯಾದಲ್ಲಿ ಪಣಂಬೂರು ಪೊಲೀಸರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪಿ.ಐ ಮೊ. ನಂ 9480805331, ಪಿಎ‌ಸ್‌ಐ ಮೊ. ನಂ. 9480805335, ಪಣಂಬೂರು ಪೊಲೀಸ್‌ ಠಾಣೆಯ ನಂ. 0824-2220530 ಸಂಪರ್ಕಿಸಬಹುದಾಗಿದೆ.

- Advertisement -

Related news

error: Content is protected !!