Monday, June 15, 2026
spot_imgspot_img
spot_imgspot_img

ಮೆಡಿಕಲ್‌ ಕಾಲೇಜಿನ ವಿದ್ಯಾರ್ಥಿ ನೇಣಿಗೆ ಶರಣು; ಗೋಡೆಬರಹ ಹಾಗೂ ಡೆತ್ ನೋಟ್ ಪತ್ತೆ..!!

- Advertisement -
- Advertisement -

ಶಿವಮೊಗ್ಗ ನಗರದ ಚನ್ನಗಿರಿ ರಸ್ತೆಯಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಡೆತ್ ನೋಟ್ ಮತ್ತು ಗೋಡೆ ಬರಹಗಳು ಪತ್ತೆಯಾಗಿದ್ದು, ಪೋಷಕರು ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ.

ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಓದುತ್ತಿದ್ದ ಬೆಂಗಳೂರು ಮೂಲದ ಯುವಕ ಅಭಯ್ ರೆಡ್ಡಿ(21) ಆತ್ಮಹತ್ಯೆ ಮಾಡಿಕೊಂಡಿದ್ದು, ಶೈಕ್ಷಣಿಕವಾಗಿ ಹಿಂದೆ ಉಳಿದಿದ್ದರ ಪರಿಣಾಮ ಆತ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಆದರೆ ಆತನ ಕುಟುಂಬ ಇದನ್ನು ನಿರಾಕರಿಸಿದೆ. ಆತನ ಸಾವಿಗೆ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಅನುಮಾನ ವ್ಯಕ್ತಪಡಿಸಿದೆ.

ಮೆಡಿಕಲ್ ವಿದ್ಯಾಭ್ಯಾಸದಲ್ಲಿ ಒಂದು ಪರೀಕ್ಷೆಯನ್ನ ನಾಲ್ಕು ಬಾರಿ ಬರೆಯಲು ಅವಕಾಶವಿದ್ದು, ಈಗಾಗಲೇ ಮೂರು ಬಾರಿ ಅಭಯ್ ಪರೀಕ್ಷೆ ಬರೆದು ಫೈಲ್ ಆಗಿದ್ದನು ಎನ್ನಲಾಗಿದೆ. ಮೊನ್ನೆ ನಾಲ್ಕನೇ ಬಾರಿ ಪರೀಕ್ಷೆ ಬರೆಯಬೇಕಿದ್ದ ಆತ ಪರೀಕ್ಷೆಗೆ ಗೈರು ಹಾಜರಿಯಾಗಿದ್ದ ಎನ್ನಲಾಗಿದೆ. ಆದರೆ ನಿನ್ನೆ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತನ ಗೋಡೆಬರಹ ಹಾಗೂ ಡೆತ್ ನೋಟ್ ಪತ್ತೆಯಾಗಿದ್ದು “ಸಹ ನಾನು ಸಾಯುವಂತಹ ದುರ್ಬಲನಲ್ಲ ಪ್ರೀತಿಸುವವರಿಗಾಗಿ ಸಾಯುತ್ತಿದ್ದೇನೆ”ಎಂದು ಬರೆದುಕೊಂಡಿದ್ದಾನೆ. ಇವೆಲ್ಲವೂ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.

ಮೃತನ ಕುಟುಂಬ ಆಡಳಿತ ಮಂಡಳಿಯ ಮೇಲೆ ಆರೋಪಿಸಿದೆ. ಆದರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಪ್ರಕರಣವನ್ನು ದಾಖಲಿಸಲಾಗಿದೆ.

- Advertisement -

Related news

error: Content is protected !!