Tuesday, June 9, 2026
spot_imgspot_img
spot_imgspot_img

ಕಾಂಗ್ರೆಸಿಗೆ ತಾಕತ್ತಿದ್ದರೆ ಬಜರಂಗದಳ ಕಾರ್ಯಕರ್ತರ ಮೈಮುಟ್ಟಿ ನೋಡಲಿ : ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ

- Advertisement -
- Advertisement -

ಪುತ್ತೂರು : ಹಿಂದೂ ಹೆಣ್ಣು ಮಕ್ಕಳ, ಮಹಿಳೆಯರ ರಕ್ಷಣೆ ಜತೆಗೆ ಯಾವುದೇ ಒಂದು ಕೆಲಸವನ್ನು ಒಂದು ನಿರ್ಧಾರ ಇಟ್ಟುಕೊಂಡು ಮಾಡುವ ಬಜರಂಗದಳವನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ನಿಷೇಧ ಮಾಡುತ್ತೇವೆ ಎಂದು ಹೇಳಿದ್ದಾರೆ. ತಾಕತ್ತಿದ್ದರೆ ಕಾಂಗ್ರೆಸ್ ಬಜರಂಗದಳ ಕಾರ್ಯಕರ್ತರ ಮೈಮುಟ್ಟಿ ನೋಡಲಿ ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗುಡುಗಿದ್ದಾರೆ.

ಬಜರಂಗದಳ, ವಿಹಿಂಪ, ಹಿಂಜಾವೇ ಇವೆಲ್ಲ ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡುತ್ತಿವೆ. ಹಿಂದೂಗಳ ರಕ್ಷಣೆ ಮಾಡುವ ಇಂತಹ ಸಂಘಟನೆಗಳನ್ನು ಕಾಂಗ್ರೆಸ್ ನಿಷೇಧ ವಿಚಾರ ಎತ್ತಿರುವುದು ಸಹಿಸಲಸಾಧ್ಯ. ಯಾವುದೇ ಕಾರಣಕ್ಕೂ ನಿಷೇಧ ಮಾಡಲು ನಾವು ಬಿಡುವುದಿಲ್ಲ. ಎದೆಗುಂದದೆ ಅವರ ಜತೆ ನಾನಿದ್ದೇನೆ. ಎಲ್ಲಾ ಮಹಿಳೆಯರು ಕಾಂಗ್ರೆಸಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಮಾಂಸಕ್ಕಾಗಿ ಗೋಹತ್ಯೆ,, ಕಳ್ಳತನಕ್ಕೆ ಕುಮ್ಮಕ್ಕು ನೀಡುತ್ತಿರುವ ಕಾಂಗ್ರೆಸ್ ಗೆ ಗೋಶಾಪ ತಟ್ಟದೇ ಇರುವುದಿಲ್ಲ ಎಂದು ಹೇಳಿದರು.

- Advertisement -

Related news

error: Content is protected !!