Friday, June 27, 2025
spot_imgspot_img
spot_imgspot_img

ಕಾಣೆಯಾಗಿದ್ದ ನಟಿ ರಮ್ಯಾ ಮುದ್ದಿನ ನಾಯಿ “ಚಾಂಪ್‌” ಇನ್ನಿಲ್ಲ

- Advertisement -
- Advertisement -

ನಟಿ ರಮ್ಯಾ ಅವರಿಗೆ ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿ ಇದೆ. ಅದರಲ್ಲೂ ಶ್ವಾನಗಳಿಗೆ ಅವರು ಸಖತ್​ ಪ್ರೀತಿ ತೋರಿಸುತ್ತಾರೆ. ರಮ್ಯಾ ಮನೆಯಲ್ಲಿ ಅನೇಕ ನಾಯಿಗಳನ್ನು ಸಾಕಿದ್ದಾರೆ. ಅವರ ಮುದ್ದಿನ ನಾಯಿ ‘ಚಾಂಪ್​’ ಕಾಣೆ ಆಗಿತ್ತು. ಕಾಣೆಯಾಗಿದ್ದ ನಟಿ ರಮ್ಯಾ ಮುದ್ದಿನ ನಾಯಿ ಚಾಂಪ್​ ಮೃತಪಟ್ಟಿದೆ. ಈ ಬಗ್ಗೆ ಸ್ವತಃ ನಟಿಯೇ ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

ನನ್ನ ನಾಯಿ ಕಾಣೆಯಾಗಿದೆ. ಅವನನ್ನು ಹುಡುಕಲು ದಯವಿಟ್ಟು ನನಗೆ ಸಹಾಯ ಮಾಡಿ ಎಂದು ನಟಿ ಬರೆದುಕೊಂಡಿದರು. 6 ಗಂಟೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಚಾಂಪ್ ಸಾವಿನ ಸುದ್ದಿ ತಿಳಿಸಿದ್ದಾರೆ.ಚಾಂಪ್ ಹೆಸರಿನ ನಾಯಿ ಇದಾಗಿದ್ದು ಕಪ್ಪು ಬಣ್ಣದಲ್ಲಿದೆ. ಇದಕ್ಕೆ ಭಾಗಶಃ ಕಣ್ಣು ಕಾಣಿಸುವುದಿಲ್ಲ. ಸುರಕ್ಷಿತವಾಗಿ ನಾಯಿಯನ್ನು ಮರಳಿಸುವವರಿಗೆ ಬಹುಮಾನ ನೀಡಲಾಗುತ್ತದೆ ಎಂದು ನಟಿ ಬರೆದುಕೊಂಡಿದರು.ನಾಯಿ ಸಾವಿಗೀಡಾದ ಸುದ್ದಿಯನ್ನು ಟ್ವೀಟ್ ಮಾಡಿದ್ದ ರಮ್ಯಾ. ಚಾಂಪ್ ಇನ್ನಿಲ್ಲ, ಅವನನ್ನು ಹುಡುಕಿದ್ದಾಗಿ ಧನ್ಯವಾದಗಳು ಎಂದು ಟ್ವಿಟರ್​ನಲ್ಲಿ ಬರೆದಿದ್ದಾರೆ.

ರಮ್ಯಾ ಅವರು ಈಗ ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ. ಅದೇ ರೀತಿ ಚುನಾವಣಾ ಪ್ರಚಾರದಲ್ಲೂ ಬ್ಯುಸಿ ಆಗಿದ್ದಾರೆ. ಈ ನಡುವೆ ಚಾಂಪ್​ ಕಾಣೆಯಾಗಿದ್ದು ಅವರಿಗೆ ಬೇಸರ ಮೂಡಿಸಿತ್ತು. ಅದಕ್ಕಾಗಿ ಅವರು ಹುಡುಕಾಟ ನಡೆಸಿದ್ದರು. ‘ನನ್ನ ನಾಯಿ ಚಾಂಪ್ ಕಾಣೆಯಾಗಿದೆ. ಕಪ್ಪು ಬಣ್ಣದ ನಾಯಿ ಅದಾಗಿದ್ದು, ಅದಕ್ಕೆ ತುಸು ಕಣ್ಣು ಮಂಜಾಗಿದೆ. ಚಾಂಪ್ ಎಂದು ಕರೆದರೆ ಪ್ರತಿಕ್ರಿಯಿಸುತ್ತದೆ. ಮೇ 6 ರಂದು ಬೆಳಿಗ್ಗೆ ರೇಸ್​ಕೋರ್ಸ್ ರಸ್ತೆಯ ತಾಜ್ ವೆಸ್ಟ್​ಎಂಡ್​ನಿಂದ ನಾಯಿ ಕಾಣೆಯಾಗಿದೆ. ಸುರಕ್ಷಿತವಾಗಿ ಮರಳಿಸಿದವರಿಗೆ ಸೂಕ್ತ ಉಡುಗೊರೆ ನೀಡಲಾಗುತ್ತದೆ. ಪ್ರೀತಿಯ ನಾಯಿಯನ್ನು ಹುಡುಕಲು ಸಹಾಯ ಮಾಡಿ’ ಎಂದು ರಮ್ಯಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದರು.

- Advertisement -

Related news

error: Content is protected !!