Saturday, June 6, 2026
spot_imgspot_img
spot_imgspot_img

ಕುಂದಾಪುರ: ಪಟಾಕಿ ಸಿಡಿತಕ್ಕೆ ನದಿ ತೀರದಲ್ಲಿ ನಿಲ್ಲಿಸಿದ್ದ ಎಂಟು ಬೋಟು ಬೆಂಕಿಗಾಹುತಿ..!

- Advertisement -
- Advertisement -

ಕುಂದಾಪುರ: ದೀಪಾವಳಿಯ ಪಟಾಕಿ ಅಬ್ಬರಕ್ಕೆ ನದಿ ತೀರದಲ್ಲಿ ನಿಲ್ಲಿಸಿದ್ದ ಎಂಟು ಬೋಟುಗಳು ಬೆಂಕಿಗಾಹುತಿಯಾಗಿ ಕೋಟ್ಯಂತರ ಮಿಕ್ಕಿ ನಷ್ಟ ಸಂಭವಿಸಿದ ಘಟನೆ ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯಲ್ಲಿ ನಡೆದಿದೆ.

ಗಂಗೊಳ್ಳಿಯ ಮ್ಯಾಂಗನೀಸ್ ರಸ್ತೆಯಲ್ಲಿ ಸಮುದ್ರ ತೀರದಲ್ಲಿ ಹಲವಾರು ಬೋಟುಗಳನ್ನು ನಿಲ್ಲಿಸಲಾಗಿತ್ತು. ಪೂಜೆಯ ಸಮಯದಲ್ಲಿ ಪಟಾಕಿ ಸಿಡಿಸಲಾಗಿತ್ತು .ಪಟಾಕಿಯ ಕಿಡಿ ನಿಲ್ಲಿಸಲಾದ ಬೋಟಿಗೆ ಹಾರಿ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಉಲ್ಬಣಗೊಂಡು ಸುತ್ತಲೂ ವ್ಯಾಪಿಸಿ ಉಳಿದ ಬೋಟಗಳಿಗೂ ವ್ಯಾಪಿಸಿದೆ.

ಬೆಂಕಿ ಅನಾಹುತಕ್ಕೆ ಎಂಟು ಬೋಟಗಳು ಸುಟ್ಟು ಭಸ್ಮವಾಗಿವೆ. ಘಟನಾ ಸ್ಥಳಕ್ಕೆ ಕುಂದಾಪುರ ಅಗ್ನಿಶಾಮಕದಳ ಆಗಮಿಸಿ ಬೆಂಕಿ ನಂದಿಸುವ ಕೆಲಸ ಮಾಡಿದೆ. ಗಂಗೊಳ್ಳಿ ಕರಾವಳಿ ಕಾವಲುಪಡೆ, ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!