Friday, May 3, 2024
spot_imgspot_img
spot_imgspot_img

ಪುತ್ತೂರು: (ಏ.10 – 20) ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ

- Advertisement -G L Acharya panikkar
- Advertisement -

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇಲ್ಲಿನ ವರ್ಷಾವಧಿ ಜಾತ್ರೆಯ ಏ.10 ರಿಂದ 20 ರವರೆಗೆ ನಡೆಯಲಿದೆ.

ದಿನಾಂಕ: 10-04-2024ನೇ ಬುಧವಾರ ಬೆಳಿಗ್ಗೆ 9:25 ನಂತರ ವೃಷಭ ಲಗ್ನದಲ್ಲಿ ಧ್ವಜಾರೋಹಣ ನಡೆದು ಕುರಿಯ ಮಾಡಾವು ಏಳ್ನಾಡುಗುತ್ತುರವರಿಂದ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಅಂಕುರಾರ್ಪಣ, ಬಲಿ ಹೊರಟು ಉತ್ಸವ, ಬೊಳುವಾರು, ಶ್ರೀರಾಮ ಪೇಟೆ ಕಾರ್ಜಾಲು, ರಕ್ತೇಶ್ವರಿ ದೇವಸ್ಥಾನ,ಕಲ್ಲೇಗ, ಕರ್ಮಲ ಈ ಭಾಗದಲ್ಲಿ ದೇವರ ಸವಾರಿ ನಡೆಯಲಿದೆ.

ದಿನಾಂಕ:11-04-2024ನೇ ಗುರುವಾರ ಕ.ರಾ.ರ.ಸಾ.ನಿ. ಪುತ್ತೂರು ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಂದ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ ಉತ್ಸವ, ನಂತರ ನೆಲ್ಲಿಕಟ್ಟೆ, ಸಾಲ್ಮರ, ಸೂತ್ರಬೆಟ್ಟು ಈ ಭಾಗದಲ್ಲಿ ದೇವರ ಸವಾರಿ ನಡೆಯಲಿದೆ.

ದಿನಾಂಕ:12-04-2024ನೇ ಶುಕ್ರವಾರ ರಾತ್ರಿ ಉತ್ಸವ, ನಂತರ ಶಿವಪೇಟೆ,ತೆಂಕಿಲ,ಕೊಟ್ಟಿಬೆಟ್ಟು ಏಳ್ನಾಡುಗುತ್ತು, ಬೈಪಾಸ್‌ ಹೆದ್ದಾರಿ, ರಾಧಾಕೃಷ್ಣ ಮಂದಿರ ಈ ಭಾಗದಲ್ಲಿ ದೇವರ ಸವಾರಿ ನಡೆಯಲಿದೆ.

.ದಿನಾಂಕ:13-04-2024ನೇ ಶನಿವಾರ ಮೇಷ ಸಂಕ್ರಮಣ ರಾತ್ರಿ ಉತ್ಸವ, ನಂತರ ಪೇಟೆ ಸವಾರಿ, ಕೋರ್ಟು ರಸ್ತೆ, ಸೈನಿಕ ಭವನ ರಸ್ತೆ,ಬಪ್ಪಳಿಗೆ, ಉರ್ಲಾಂಡಿ, ಬೊಳ್ವಾರ್‌ಬೈಲು ಈ ಭಾಗದಲ್ಲಿ ದೇವರ ಸವಾರಿ ನಡೆಯಲಿದೆ.

ದಿನಾಂಕ:14-04-2024ನೇ ಆದಿತ್ಯವಾರ ಸೌರಮಾನ ಯುಗಾದಿ (ವಿಷು) ಬೆಳಿಗ್ಗೆ ಉತ್ಸವ, ವಸಂತ ಕಟ್ಟೆಪೂಜೆ, ರಾತ್ರಿ ಉತ್ಸವ, ಬಂಡಿ ಉತ್ಸವ (ಚಂದ್ರಮಂಡಲ) , ಕೊಂಬೆಟ್ಟು, ಬೊಳುವಾರು ಹಾರಾಡಿ,ತಾಳಿಪ್ಪಾಡಿ,ದ್ರಾವಿಡ ಬ್ರಾಹ್ಮಣ ಹಾಸ್ಟೆಲ್‌, ಸಕ್ಕರೆ ಕಟ್ಟೆ ಗೆ ದೇವರ ಸವಾರಿ ನಡೆಯಲಿದೆ.

ದಿನಾಂಕ:15-04-2024ನೇ ಸೋಮವಾರ ರಾತ್ರಿ ಉತ್ಸವ, ನಂತರ ಬನ್ನೂರು,ಅಶೋಕನಗರ,ರೈಲ್ವೆ ಮಾರ್ಗ ಭಾಗದಲ್ಲಿ ದೇವರ ಸವಾರಿ ನಡೆಯಲಿದೆ.

ದಿನಾಂಕ:16-04-2024ನೇ ಮಂಗಳವಾರ ಬೆಳಿಗ್ಗೆ ಗಂಟೆ 8.30ರಿಂದ ತುಲಾಭಾರ ಸೇವೆಯು ನಡೆಯಲಿದೆ. ರಾತ್ರಿ ಉತ್ಸವ, ನಂತರ ಬಲ್ನಾಡು ಶ್ರೀ ದಂಡನಾಯಕ – ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರ ಬರುವ ಕಿರುವಾಳು , ಪಾಲಕಿ ಉತ್ಸವ, ಸಣ್ಣ ರಥೋತ್ಸವ, ಕೆರೆ ಉತ್ಸವ,ತೆಪ್ಪೋತ್ಸವ ನಡೆಯಲಿದೆ.

ದಿನಾಂಕ:17-04-2024ನೇ ಬುಧವಾರ ಬೆಳಿಗ್ಗೆ ಉತ್ಸವ, ವಸಂತ ಕಟ್ಟೆಪೂಜೆ, ದರ್ಶನಬಲಿ,, ಬಟ್ಟಲುಕಾಣಿಕೆ, ಬ್ರಹ್ಮರಥ ದಾನಿ ದಿ.ನೆಟ್ಟಾಳ ಮುತ್ತಪ್ಪ ರೈ ದೇರ್ಲ ಇವರ ಸ್ಮರಣಾರ್ಥ ಸಹೋದರಿ, ಸಹೋದರರು ಹಾಗೂ ಮಕ್ಕಳಿಂದ ಮಧ್ಯಾಹ್ನ ಅನ್ನಸಂತರ್ಪಣೆ ಜರಗಳಿದೆ.
ರಾತ್ರಿ 7.30 ರ ನಂತರ ಉತ್ಸವ ನಡೆದು ಬಳಿಕ ಸಿಡಿಮದ್ದು ಪ್ರದರ್ಶನ( ಪುತ್ತೂರು ಬೆಡಿ) ದೊಂದಿಗೆ ಬ್ರಹ್ಮರಥೋತ್ಸವ ನಡೆಯಲಿದೆ. ನಂತರ ಬಂಗಾರ್‌ ಕಾಯರ್‌ಕಟ್ಟೆ ಬಾಗದಲ್ಲಿ ದೇವರ ಸವಾರಿ ನಡೆಯಲಿದೆ.
ಶ್ರೀ ದಂಡನಾಯಕ – ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆ, ಶ್ರೀ ಭೂತಬಲಿ, ಶಯನ ನಡೆಯಲಿದೆ.

ದಿನಾಂಕ:18-04-2024ನೇ ಗುರುವಾರ ಬೆಳಿಗ್ಗೆ 7.30ಕ್ಕೆ ದೇವರ ಬಾಗಿಲು ತೆಗೆಯುವ ಮುಹೂರ್ತ, ಬೆಳಿಗ್ಗೆ 8.30ರಿಂದ ತುಲಾಭಾರ ಸೇವೆಯು ಜರಗಳಿದೆ. ಸಂಜೆ ಗಂಟೆ 3.30ಕ್ಕೆ ದೇವರು ಅವಭ್ರತ ಸ್ನಾನಕ್ಕೆ ವೀರಮಂಗಲಕ್ಕೆ ಸವಾರಿ ಹೊರಡುವುದು.

ದಿನಾಂಕ:19-04-2024ನೇ ಶುಕ್ರವಾರ ಬೆಳಿಗ್ಗೆ ಧ್ವಜಾವರೋಹಣ ನಡೆಯಲಿದೆ. ರಾತ್ರಿ ಚೂರ್ಣೋತ್ಸವ ವಸಂತ ಪೂಜೆ ಪ್ರಾರಂಭಗೊಳ್ಳುವುದು, ನಂತರ ಹುಲಿಭೂತ, ರಕ್ತೇಶ್ವರಿ ನೇಮ ಜರಗಳಿದೆ.

20.04.2024ನೇ ಶನಿವಾರ ಸಂಪ್ರೋಕ್ಷಣೆ, ರಾತ್ರಿ ಮಂತ್ರಾಕ್ಷತೆ, ಅಂಙಣತ್ತಾಯ, ಪಂಜುರ್ಲಿವಗೈರೆ ದೈವಗಳ ನೇಮ ಜರಗಳಿದೆ.

- Advertisement -

Related news

error: Content is protected !!