Friday, May 3, 2024
spot_imgspot_img
spot_imgspot_img

ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಬೈಕ್ ಡಿಕ್ಕಿ; ಬೈಕ್ ಸವಾರರು ಸ್ಥಳದಲ್ಲೇ ಮೃತ್ಯು..!

- Advertisement -G L Acharya panikkar
- Advertisement -

ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್‌ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾಸನ ತಾಲೂಕಿನ, ಶಾಂತಿಗ್ರಾಮ ಟೋಲ್ ಬಳಿ ನಡೆದಿದೆ.

ಮೃತಪಟ್ಟ ಬೈಕ್‌ ಸವಾರರನ್ನು ಅರಕಲಗೂಡು ತಾಲೂಕಿನ ಚಿಕ್ಕ ಆಲದಹಳ್ಳಿ ಗ್ರಾಮದ ಆಶ್ವತ್ಥ (42) ಹಾಗೂ ಆಲದಹಳ್ಳಿ ಗ್ರಾಮದ ಸಾಗರ್ (42) ಎಂದು ಗುರುತಿಸಲಾಗಿದೆ.

ಶಾಂತಿಗ್ರಾಮ ಟೋಲ್ ಬಳಿ ರಸ್ತೆ ಬದಿ ಟ್ರಕ್ ನಿಲ್ಲಿಸಿ, ಚಾಲಕ ಹಾಗೂ ನಿರ್ವಾಹಕ ಅಡುಗೆ ಮಾಡುತ್ತಿದ್ದ ಸಂದರ್ಭದಲ್ಲಿ ಚನ್ನರಾಯಪಟ್ಟಣದ ಕಡೆಯಿಂದ ಹಾಸನದ ಕಡೆಗೆ ಬರುತ್ತಿದ್ದ ಬೈಕ್ ಸವಾರರು ಹಿಂದಿನಿಂದ ಬಂದು ಟ್ರಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!