- Advertisement -
- Advertisement -




ರಸ್ತೆ ಬದಿ ಶೌಚಕ್ಕೆ ಕುಳಿತ್ತಿದ್ದ 6 ವರ್ಷದ ಬಾಲಕನ ಮೇಲೆ ಗೂಡ್ಸ್ ವಾಹನದ ಚಕ್ರ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರು ಸಿ.ಟಿ. ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತಪಟ್ಟ ಬಾಲಕ ಕೊಳಗೇರಿ ನಿವಾಸಿ ಶಶಿಕುಮಾರ್ ಎಂಬವರ ಪುತ್ರ ಅಶ್ವಂತ್ (6) ಎಂದು ಗುರುತಿಸಲಾಗಿದೆ.
ಬಾಲಕ ಬೆಳಗ್ಗೆ ಸಿದ್ದಯ್ಯ ರಸ್ತೆಯ ಬದಿ ಶೌಚಕ್ಕೆ ಕುಳಿತ್ತಿದ್ದ. ಈತನ ಹಿಂಭಾಗವೇ ಸರಕು ಸಾಗಣೆ ವಾಹನ ನಿಲುಗಡೆ ಮಾಡಲಾಗಿತ್ತು ಎಂದು ತಿಳಿದು ಬಂದಿದೆ. ಬಳಿಕ ಚಾಲಕ ವಾಹನದ ಹಿಂಭಾಗ ಬಾಲಕ ಶೌಚಕ್ಕೆ ಕುಳಿತಿರುವುದನ್ನು ಗಮನಿಸದೆ ವಾಹನವನ್ನು ಹಿಮ್ಮುಖವಾಗಿ ಚಲಾಯಿಸಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂದರ್ಭ ಬಾಲಕನ ಮೇಲೆಯೇ ವಾಹನದ ಹಿಂಬದಿ ಚಕ್ರ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.
- Advertisement -