Monday, May 6, 2024
spot_imgspot_img
spot_imgspot_img

ಮಾಣಿ : ಸೂರಿಕುಮೇರು ಸುನ್ನೀ ಸಂಘಟನೆಗಳ ವತಿಯಿಂದ ಮಹ್‌ಳರತುಲ್ ಬದ್ರಿಯಾ ಕಾರ್ಯಕ್ರಮ

- Advertisement -G L Acharya panikkar
- Advertisement -

ಯುವಕರು ಮಾದಕ ವ್ಯಸನಿಗಳಾಗಿ ತಮ್ಮ ಯೌವ್ವನವನ್ನು ಬಲಿ ನೀಡುತ್ತಿರುವುದು ಖೇದಕರ : ಬಹು|ಇಬ್ರಾಹಿಂ ಸ‌ಅದಿ ಮಾಣಿ

ಮಾಣಿ : ಯುವಕರು ಮಾದಕ ವ್ಯಸನಿಗಳಾಗಿ ತಮ್ಮ ಯೌವ್ವನವನ್ನು ಮುಗಿಸುತ್ತಿರುವುದು ದಿನದಿಂದ ದಿನಕ್ಕೆ ಅಪಾಯಕಾರಿಯಾಗಿ ಹೆಚ್ಚುತ್ತಿದ್ದು ಆ ಮೂಲಕ ಕೆಡುಕಿನ ದಾಸರಾಗಿ ತಮ್ಮ ಇಹಪರ ನಷ್ಟಹೊಂದುತ್ತಿರುವುದು ಬಹಳ ಖೇದಕರ ಮತ್ತು ಪೋಷಕರು ಮತ್ತೆ ಮತ್ತೆ ಜಾಗೃತಿಗೊಳ್ಳುವುದು ಹಾಗೂ ಕೆಟ್ಟ ಗೆಳೆಯರ ಸಹವಾಸದಿಂದ ದೂರ ಸರಿಯುವಂತೆ ಮಾಡುವುದು ಅನಿವಾರ್ಯವಾಗಿದೆ ಎಂದು ಕರ್ನಾಟಕ ಮುಸ್ಲಿಂ ಜಮಾ‌ಅತ್ ಮಾಣಿ ಸರ್ಕಲ್ ಅಧ್ಯಕ್ಷರಾದ ಬಹು| ಇಬ್ರಾಹಿಂ ಸ‌ಅದಿ ಮಾಣಿ ಹೇಳಿದರು. ಅವರು ಎಸ್‌ವೈಎಸ್ ಎಸ್ಸೆಸ್ಸೆಫ್ ಕೆಎಂಜೆ ಸೂರಿಕುಮೇರು ಯುನಿಟ್ ವತಿಯಿಂದ ನಡೆದ ಮಹ್‌ಳರತುಲ್ ಬದ್ರಿಯಾ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ದುಆ ಮಾಡಿ ಉದ್ಘಾಟಿಸಿದರು. ಕರ್ನಾಟಕ ಮುಸ್ಲಿಂ ಜಮಾ‌ಅತ್ ಮಾಣಿ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ, ಸರ್ಕಲ್ ಎಕ್ಸಿಕ್ಯೂಟಿವ್ ಸಿನಾನ್ ಮದನಿ ಮಾಣಿ, ಮುಸ್ಲಿಂ ಜಮಾ‌ಅತ್ ನಾಯಕರುಗಳಾದ ಕರೀಂ ನೆಲ್ಲಿ, ಯೂಸುಫ್ ಹಾಜಿ ಸೂರಿಕುಮೇರು, ಎಸ್ ಆರ್ ಸುಲೈಮಾನ್ ಸೂರಿಕುಮೇರು, ಹಮೀದ್ ಮಾಣಿ, ಇಬ್ರಾಹಿಂ ಮಾಣಿ, ಫಾರೂಕ್ ಸೂರಿಕುಮೇರು, ಸೈಫುಲ್ಲಾಹ್ ಖಾನ್ ಮಾಣಿ, ಕುಂಞಿಹಾಜಿ ಸೂರ್ಯ, ಪುತ್ತುಮೋನು ಬಡಜ ಮುಂತಾದವರು ಉಪಸ್ಥಿತರಿದ್ದರು. ಅಲ್ ಅರ್ಖಮಿಯ್ಯ ಕ್ಯಾಂಪ್ ಹಾಗೂ ಅನುಪಯುಕ್ತ ವಸ್ತುಗಳ ಸಂಗ್ರಹ ಅಭಿಯಾನದ ಬಗ್ಗೆ ಪ್ರಚಾರ ಮಾಡಲಾಯಿತು. ಅಜ್ಮಲ್ ಮಾಣಿ ಬೈತ್ ಹಾಡಿದರು. ಸಲೀಂ ಮಾಣಿ ಸ್ವಾಗತಿಸಿ ವಂದಿಸಿದರು.

Insta: glacharyajewellers
Fb: glacharya

- Advertisement -

Related news

error: Content is protected !!