Wednesday, May 1, 2024
spot_imgspot_img
spot_imgspot_img

ಸೈಕಲ್‌ಗೆ ಕಾರು ಡಿಕ್ಕಿ; ಸೈಕಲ್‌ ಸವಾರ ಸ್ಥಳದಲ್ಲೇ ಸಾವು..!

- Advertisement -G L Acharya panikkar
- Advertisement -

ಸೈಕಲ್‌ನಲ್ಲಿ ತೆರಳುತ್ತಿದ್ದ ವೃದ್ಧನಿಗೆ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಸೈಕಲ್‌ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹಾಸನ ನಗರದ ಡೈರಿ ಸರ್ಕಲ್ ಬಳಿ ಅಪಘಾತ ನಡೆದಿದೆ.

ಮೃತಪಟ್ಟ ವ್ಯಕ್ತಿ ಶ್ರೀರಾಮನಗರದ ನಿವಾಸಿ ಆನಂದ್ (60) ಎಂದು ಗುರುತಿಸಲಾಗಿದೆ.

ಕಾಟೀಹಳ್ಳಿ ಕಡೆಯಿಂದ ಬಂದ ಕಾರು ತಿರುವಿನಲ್ಲಿ ಸೈಕಲ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಹಾರಿ ಬಿದ್ದ ಆನಂದ್‌ ಅವರ ಮುಖವೇ ಅಪ್ಪಚ್ಚಿ ಆಗಿತ್ತು. ತಲೆಗೆ ಗಂಭೀರವಾಗಿ ಗಾಯವಾಗಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಹಾಸನ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Related news

error: Content is protected !!