Saturday, June 28, 2025
spot_imgspot_img
spot_imgspot_img

ಸುರತ್ಕಲ್ : ರಾಂಗ್ ಸೈಡ್ ನಿಂದ ಬಂದ ಕಾರೊಂದು ಡಿಕ್ಕಿ – ವಿದ್ಯಾರ್ಥಿನಿಯರಿಬ್ಬರು ಗಂಭೀರ

- Advertisement -
- Advertisement -

ಸುರತ್ಕಲ್: ರಸ್ತೆ ದಾಟುತ್ತಿದ್ದಾಗ ರಾಂಗ್ ಸೈಡ್ ನಿಂದ ಬಂದ ಕಾರೊಂದು ಡಿಕ್ಕಿ ಹೊಡೆದು ವಿದ್ಯಾರ್ಥಿನಿಯರಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸುರತ್ಕಲ್ ಜಂಕ್ಷನ್ ನಲ್ಲಿ ನಡೆದಿದೆ.

ಸ್ಥಳೀಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ಅಲೈಡ್ ಸೈನ್ಸ್ ವಿಭಾಗದ 2ನೇ ವರ್ಷದ ವಿದ್ಯಾರ್ಥಿಗಳಾದ ಕೇರಳ ರಾಜ್ಯದ ಕಾಸರಗೋಡು ಮೂಲದವರಾದ ಭಾವನಾ (19) ಮತ್ತು ಮಯೂರಿ (20) ಗಂಭೀರ ಗಾಯಗೊಂಡವರು. ಬೆಳಗ್ಗೆ ಎಂದಿನಂತೆ ಪಿಜಿಯಿಂದ ಕಾಲೇಜಿಗೆ ಹೋಗಲು ಸುರತ್ಕಲ್ ನಟರಾಜ್ ಟಾಕೀಸ್ ಸಮೀಪದ ಬಸ್ ನಿಲ್ದಾಣದ ಬಳಿ ಹೆದ್ದಾರಿಯಲ್ಲಿ ದಾಟಲು ಯತ್ನಿಸಿದ ವೇಳೆ ಒನ್ ವೇಯಲ್ಲಿ ಬಂದ ಕಾರು ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ರಭಸಕ್ಕೆ ವಿದ್ಯಾರ್ಥಿನಿಯರು ಎಗರಿ ಬಿದ್ದಿದ್ದು ತಲೆ, ಕೈ, ಕಾಲುಗಳಿಗೆ ಗಂಭೀರ ಏಟಾಗಿ ಪ್ರಜ್ಞೆ ಕಳೆದುಕೊಂಡಿದ್ದರು. ತತ್‌ಕ್ಷಣ ಸುತ್ತಮುತ್ತಲಿನ ಅಂಗಡಿಯವರು, ವಾಹನದ ಚಾಲಕರು ನೆರವಿಗೆ ಬಂದು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರು. ಇಬ್ಬರೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!