Saturday, June 13, 2026
spot_imgspot_img
spot_imgspot_img

ರಸ್ತೆಗೆ ಬದಿಯಲ್ಲಿ ನಿಂತ ಮಗುವಿನ ಮೇಲೆ ಹರಿದ ಕಾರು; ಸ್ಥಳದಲ್ಲೇ ಮೃತ್ಯು..!

- Advertisement -
- Advertisement -

ಆಟವಾಡುತ್ತ ರಸ್ತೆ ಬದಿಯಲ್ಲಿ‌ ಬಂದಿದ್ದ ಮಗು ಮೇಲೆ ಇನ್ನೋವಾ ಕಾರೊಂದು ಹರಿದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೀದರ್ ‌ನಗರದ ಹಾರೋಗೆರಿ ಬಳಿ ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆ ಮುಂಭಾಗದಲ್ಲಿ ನಡೆದಿದೆ.

ಮೃತಪಟ್ಟ ಮಗು ಬೀದರ್​ನ ಹಾರೊಗೇರಿ‌ ನಿವಾಸಿ ಸತೀಶ ಪಾಟೀಲ್ ಹಾಗೂ ಸಂಗೀತಾ ಎಂಬ ದಂಪತಿ ಮಗು ಬಸವಚೇತನ (2) ಎಂದು ಗುರುತಿಸಲಾಗಿದೆ.

ಎರಡೂವರೆ ವರ್ಷದ ಬಾಲಕ ಬಸವಚೇತನ ಆಟವಾಡುತ್ತಾ ಮೈನ್ ರೋಡ್​ ಬಳಿಗೆ ಬಂದು ಬಿಟ್ಟಿದೆ. ಇನ್ನೋವಾ ಕಾರು ಬರುತ್ತಿದ್ದ ವೇಳೆ ರಸ್ತೆ ದಾಟಲು ಮಗು ಯತ್ನಿಸಿದೆ. ಮಗು ರಸ್ತೆ ದಾಟಿದೆ ಎಂದು ತಿಳಿದು ಕಾರು ಚಾಲಕ ಮುಂದಕ್ಕೆ ಬಂದಿದ್ದಾನೆ. ಕಾರು ಮುಂದಕ್ಕೆ ಬಂದಿದ್ದನ್ನ ನೋಡಿ ಬಾಲಕ ಅಲ್ಲೇ ಮಧ್ಯ ನಿಂತು ಬಿಟ್ಟಿದ್ದಾನೆ. ಮುಂದೆ ಬಾಲಕ ನಿಂತಿದ್ದನ್ನ ನೋಡದೆ ಇನ್ನೋವಾ ಚಾಲಕನ ಮೇಲೆ ಕಾರು ಹರಿಸಿ ಬಿಟ್ಟಿದ್ದಾನೆ. ಮಗುವಿನ ಮೇಲೆ ಕಾರು ಹರಿದ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!