Tuesday, May 14, 2024
spot_imgspot_img
spot_imgspot_img

10 ಅಡಿ ಆಳದ ನೀರಿನ ಸಂಪ್​​ಗೆ ಬಿದ್ದ ಮಗು; ಸಮಯ ಪ್ರಜ್ಞೆ ಮೆರೆದ ಟ್ರಾಫಿಕ್​​ ಪೊಲೀಸ್

- Advertisement -G L Acharya panikkar
- Advertisement -

ಮನೆಯೊಂದರಲ್ಲಿ 10 ಅಡಿ ಆಳದ ಸಂಪ್​ಗೆ ಬಿದ್ದಿದ್ದ ಮಗುವನ್ನು ಸಂಚಾರ ಠಾಣೆಯ ಪಿಎಸ್​​ಐ ಒಬ್ಬರು ಮಗುವನ್ನು ರಕ್ಷಿಸಿದ ಘಟನೆ ಬೆಂಗಳೂರು ನಗರದ ಬಿಇಎಲ್​ ಬಳಿ ನಡೆದಿದೆ.

ಸಂಪ್​​ಗೆ ಬಿದ್ದಿದ್ದ ಎರಡು ವರ್ಷದ ಮಗುವನ್ನು ಬ್ಯಾಟರಾಯನಪುರದ ಸಂಚಾರ ಠಾಣೆಯ ಪಿಎಸ್ಐ ನಾಗರಾಜ್ ಅವರು ರಕ್ಷಣೆ ಮಾಡಿದ್ದಾರೆ.

ಬಿಇಎಲ್​ ಬಳಿಯ ಮನೆಯೊಂದರಲ್ಲಿ ಮಗು ಆಟ ಆಡುತ್ತ ಸಂಪ್​ನಲ್ಲಿನ ನೀರಿಗೆ ಬಿದ್ದಿದೆ. ಇದನ್ನು ಗಮನಿಸಿದ ಮಹಿಳೆಯರು ಸಹಾಯಕ್ಕಾಗಿ ಜೋರಾಗಿ ಕೂಗಾಡಿದ್ದಾರೆ. ಇದೇ ಸಮಯದಲ್ಲಿ ಪಿಎಸ್ಐ ನಾಗರಾಜ್ ಅವರು ಠಾಣೆಗೆ ಕರ್ತವ್ಯಕ್ಕಾಗಿ ತೆರಳುವಾಗ ವಿಷಯ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ತೆರಳಿ ಕೂಡಲೇ ಸಂಪ್​ನ ನೀರಿಗೆ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನ ರಕ್ಷಣೆ ಮಾಡಿದ್ದಾರೆ. ಸ್ಥಳೀಯ ಆಸ್ಪತ್ರೆಯಲ್ಲಿ ಮಗುವಿಗೆ ಸದ್ಯ ಚಿಕಿತ್ಸೆ ಮುಂದುವರೆದಿದ್ದು ಮಗು ಪ್ರಾಣಾಪಾಯದಿಂದ ಪಾರಾಗಿದೆ. ಪಿಎಸ್​ಐ ಅವರ ಕಾರ್ಯಕ್ಕೆ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!