Friday, May 3, 2024
spot_imgspot_img
spot_imgspot_img

ಬಂಟ್ವಾಳ: ಕ್ಯಾನ್ಸರ್ ಪೀಡಿತರಿಗಾಗಿ ತನ್ನ ಕೇಶರಾಶಿಯನ್ನು ದಾನ ಮಾಡಿದ 4 ನೇ ತರಗತಿ ವಿದ್ಯಾರ್ಥಿನಿ

- Advertisement -G L Acharya panikkar
- Advertisement -

ಬಂಟ್ವಾಳ: ಇಲ್ಲೊಬ್ಬಳು ಶಾಲಾ ಬಾಲಕಿ ತನ್ನ ಕೇಶರಾಶಿಯನ್ನು ಕ್ಯಾನ್ಸರ್ ಪೀಡಿತರಿಗಾಗಿ ದಾನ ಮಾಡಿದ್ದು,
ಬಾಲಕಿ ಹರ್ಷಿಕಾ ಕಣಿಯೂರು ಲೋಕೇಶ್ ಮತ್ತು ರೇಣುಕಾ ಕಣಿಯೂರು ಅವರ ಪುತ್ರಿಯಾಗಿದ್ದಾರೆ. 9 ವರ್ಷದ ಬಾಲಕಿ ಹರ್ಷಿಕಾ
ಬಂಟ್ವಾಳ ತಾಲೂಕಿನ ಕಣಿಯೂರು ಸರಕಾರಿ ಪ್ರಾಥಮಿಕ ಶಾಲೆಯ 4 ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ

ತಾಯಿ ರೇಣುಕಾ ಕಾಣಿಯೂರು ಜ್ಞಾನ ದೀಪ ಶಿಕ್ಷಕಿಯೂ, ಉತ್ತಮ ಸಂಪನ್ಮೂಲ ವ್ಯಕ್ತಿಯು, ನಿರೂಪಕರಾಗಿದ್ದು ಮಕ್ಕಳು ಮನೆಯಲ್ಲಿ ಪೋಷಕರ ಮಾತನ್ನು ಹೇಗೆ ಅನುಕರಿಸುತಾರೆ ಎಂಬುದಕ್ಕೆ ತನ್ನ ಮಗಳ ಉದಾಹರಣೆ ನೀಡುತಾರೆ,, ತನ್ನ ಮಗಳು 1ನೇ ತರಗತಿಯಲ್ಲಿ ಇರುವಾಗ ಶಾಲೆಯಲ್ಲಿ ತನ್ನ ಸಹಪಾಠಿಗಳು ಕೂದಲು ಕಟ್ ಮಾಡಿದ್ದನ್ನು ನೋಡಿ ಮನೆಗೆ ಬಂದು ತನ್ನ ಅಮ್ಮನಲ್ಲಿ ತನ್ನ ಕೂದಲನ್ನು ಕಟ್ ಮಾಡಲು ಹೇಳಿದಾಗ, ಬೇಡ ಕೂದಲು ದೊಡ್ಡದು ಆದಮೇಲೆ ಕಟ್ ಮಾಡಿದ್ರೆ ಕೂದಲು ಇಲ್ಲದ ಅದೆಷ್ಟೋ ಮಂದಿಗೆ ನಮ್ಮ ಕೂದಲು ನೀಡಿ ಅವರು ಸುಂದರವಾಗಿ ಕಾಣುವಂತೆ ಮಾಡಬಹುದು ಎಂದು ಹೇಳಿ, ಕೂದಲು ಇಲ್ಲದೆ ಕ್ಯಾನ್ಸರ್ ಪೀಡಿತರ ಫೋಟೋ ತೋರಿಸಿದರು, ಅದಕ್ಕೆ ಚಿಕ್ಕ ಮಗು ಎಷ್ಟು ಉದ್ದ ಬರ್ಬೇಕು ಕೊಡಲು ಎಂದು ಮರು ಪ್ರಶ್ನೆ ಮಾಡಿ ಕೇಳಿದಾಗ 30 ಸೆಂಟಿಮೀಟರ್ ಆದ್ರೆ ಮಾತ್ರ ಕೂದಲು ಕೊಡಲು ಆಗುತ್ತೆ ಅಂದಿದ್ರು, ಆ ದಿನದಿಂದ ಮಗು ಕೂದಲು ಬೆಳೆಸವ ಯೋಚನೆಯಲ್ಲೇ ಇತ್ತು,

ಪೋಷಕರು ಮರೆತರು ಮಗು ಮರೆತಿಲ್ಲ, ಪ್ರತಿ ವಾರ ವಾರ ಕೂದಲನ್ನು ಅಳತೆ ಮಾಡುತಾ ಇತ್ತು, ಮೊನ್ನೆ ಒಂದು ದಿನ ಬಂದು ಅಮ್ನ ನನ್ನ ಕೂದಲು 30 ಸೆಂಟಿಮೀಟರ್ ಆಗಿದೆ ಈವಾಗ ಕಟ್ ಮಾಡಿ ಕೂದಲು ಇಲ್ಲದವರಿಗೆ ಕೊಡುವ ಎಂದು ಹೇಳಿದಾಗ ತಾಯಿಗೆ ಆಶ್ಚರ್ಯ, ಯಾವಾಗ ತಾನು ಹೇಳಿದ ಮಾತನ್ನು ಮನಸ್ಸಿಗೆ ಹಚ್ಚಿಕೊಂಡು ಕೂದಲು ಬೆಲೆಯು ವರೆಗೆ ಅಳತೆ ಮಾಡಿಕೊಂಡು ಬಂದು ಹೇಳಿದ್ದನ್ನು ನೋಡಿ, ಈಗ ಬೇಡ ಏಪ್ರಿಲ್ ರಜೆಯಲ್ಲಿ ಕೊಡೋಣ ಎಂದರು ಮಗು ಕೇಳಲಿಲ್ಲ, ಅದರಂತೆ ತನ್ನ ಮಗಳ ಇಚ್ಛೆ ಪ್ರಕಾರ ಇವತ್ತು ತನ್ನ ಸುಂದರವಾದ ಕೂದಲನ್ನು ಕಟ್ ಮಾಡಿ ಯುವಶಕ್ತಿ ಕಡೆಶಿವಾಲಯದ ಸಂಘಟನೆಯ ಮೂಲಕ ಕ್ಯಾನ್ಸರ್ ರೋಗಿಗಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ದಾನ ಮಾಡಿದ್ದಾರೆ.

ಎಳೆಯ ಮಗುವಿನ ‌ಮನಸ್ಸಿಗೆ ದಾನ ಮಾಡುವ ಉತ್ತಮ ಗುಣದ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!