Sunday, June 14, 2026
spot_imgspot_img
spot_imgspot_img

ಪ್ರೇಯಸಿಯ ಕತ್ತು ಕೊಯ್ದು ಕೊಂದ ಪ್ರಿಯಕರ! ಮರು ಸಂಧಾನಕ್ಕೆ‌ ಕರೆಸಿ ಹತ್ಯೆ

- Advertisement -
- Advertisement -

ಪ್ರೇಮ ವೈಫಲ್ಯದಿಂದ ಪ್ರಿಯಕರ ತನ್ನ ಪ್ರೇಯಸಿಯ ಕತ್ತು ಕುಯ್ದು ಬರ್ಬರವಾಗಿ ಹತ್ಯೆಗೈದ ಘಟನೆ ಹಾಸನ ತಾಲೂಕಿನ ಕುಂತಿಗುಡ್ಡದಲ್ಲಿ ನಡೆದಿದೆ.

ಸುಚಿತ್ರಾ (20) ಕೊಲೆಯಾದ ಯುವತಿ. ತೇಜಸ್ (23) ಕೊಲೆ ಮಾಡಿರುವ ಪ್ರಿಯಕರ. ಸುಚಿತ್ರಾ ಮತ್ತು ತೇಜಸ್‌ ಇಬ್ಬರೂ ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳು. ಒಂದೇ ತರಗತಿಯಲ್ಲಿದ್ದ ಇಬ್ಬರೂ ಕೆಲವು ಸಮಯದಿಂದ ಪ್ರೀತಿಸುತ್ತಿದ್ದರು. ಆದರೆ, ಈ ನಡುವೆ ಅವರ ಮಧ್ಯೆ ಯಾವುದೋ ಕಾರಣಕ್ಕೆ ಜಗಳವಾಗಿ ಲವ್‌ ಬ್ರೇಕಪ್‌ ಆಗಿತ್ತು.ಪರಸ್ಪರ ಮಾತನಾಡಿ ಜಗಳ ಪರಿಹರಿಸಿಕೊಳ್ಳೋಣ ಎಂದು ತೇಜಸ್‌ ಸುಚಿತ್ರಾಳಿಗೆ ತಿಳಿಸಿದ್ದ. ಮಾತುಕತೆಗಾಗಿ ಅವನು ಆಕೆಯನ್ನು ಅಗಿಲೆ ಗ್ರಾಮದ ಬಳಿಯ ಕುಂತಿಬೆಟ್ಟಕ್ಕೆ ಕರೆಸಿಕೊಂಡದ್ದನು.

ಆತನ ಮಾತು ನಂಬಿ ಸುಚಿತ್ರಾ ಕುಂತಿಬೆಟ್ಟಕ್ಕೆ ಬಂದಿದ್ದಳು. ಅಲ್ಲಿ ಅವರಿಬ್ಬರೂ ತುಂಬ ಹೊತ್ತು ಮಾತನಾಡಿದ್ದು, ಆದರೆ, ಕೊನೆಗೆ ಆತ ಆಕೆಯ ಕತ್ತನ್ನೇ ಸೀಳಿ ಕೊಲೆ ಮಾಡಿದ್ದಾನೆ. ಈ ರೀತಿ ಕೊಲೆ ಮಾಡಿದ್ದನ್ನು ನೋಡಿದ ಕುಂತಿ ಬೆಟ್ಟಕ್ಕೆ ಬಂದಿದ್ದ ಇತರರು ಪೊಲೀಸರಿಗೆ ತಿಳಿಸಿದರು. ಸುಚಿತ್ರಾಳ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದಿದ್ದಾನೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!