- Advertisement -
- Advertisement -
ಶಿರ್ವ: ಪತಿ ನಿಧನರಾದ 5 ಗಂಟೆ ಅಂತರದಲ್ಲಿ ಪತ್ನಿ ಕೂಡ ಸಾವನ್ನಪ್ಪಿದ್ದು, ಸಾವಿನಲ್ಲೂ ದಂಪತಿಗಳು ಒಂದಾದ ಘಟನೆ ಶಿರ್ವ ಸಮೀಪದ ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಡೇರುಗುತ್ತು ಎಂಬಲ್ಲಿ ನಡೆದಿದೆ.
ಎಡೇರುಗುತ್ತು ನಿವಾಸಿ ಸುಂದರ ಶೆಟ್ಟಿ(70) ಮತ್ತು ಅವರ ಪತ್ನಿ ಎಡೇರುಗುತ್ತು ವನಜಾ ಶೆಟ್ಟಿ(62) ಸೋಮವಾರ ಒಂದೇ ದಿನ 5 ಗಂಟೆಗಳ ಅಂತರದಲ್ಲಿ ನಿಧನರಾದರು. ಈ ಮೂಲಕ ಪತಿ-ಪತ್ನಿ ಸಾವಿನಲ್ಲೂ ಒಂದಾದರು.
ವಯೋಸಹಜ ಅನಾರೋಗ್ಯದಿಂದ ಸುಂದರ ಶೆಟ್ಟಿ ಸೋಮವಾರ ಬೆಳಿಗ್ಗೆ 9ಗಂಟೆಗೆ ಎಡೇರುಗುತ್ತುವಿನಲ್ಲಿ ನಿಧನರಾಗಿದ್ದು, ಅವರ ಪಾರ್ಥಿವ ಶರೀರವನ್ನು ಶಂಕರಪುರದ ಅವರ ಮೂಲ ನಿವಾಸಕ್ಕೆ ಕೊಂಡೊಯ್ಯಲಾಯಿತು. ಮಧ್ಯಾಹ್ನ ಸುಮಾರು 2 ಗಂಟೆ ಸುಮಾರಿಗೆ ಅವರ ಪತ್ನಿ ವನಜಾ ಶೆಟ್ಟಿಯೂ ನಿಧನ ಹೊಂದಿದರು. ದಂಪತಿ ಮಕ್ಕಳಿಲ್ಲದೆ ಇದ್ದು ಕುಟುಂಬಸ್ಥರನ್ನು ಅಗಲಿದ್ದಾರೆ
- Advertisement -