Sunday, June 14, 2026
spot_imgspot_img
spot_imgspot_img

‘ಫ್ರೀ ಪ್ಯಾಲೆಸ್ತೀನ್’ ಎಂದು ಕೂಗುತ್ತಾ ನಾಗರಿಕರತ್ತ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿ; 6 ಮಂದಿಗೆ ಗಾಯ..!

- Advertisement -
- Advertisement -

ವಾಷಿಂಗ್ಟನ್: ‘ಫ್ರೀ ಪ್ಯಾಲೆಸ್ತೀನ್’ ಎಂದು ಕೂಗುತ್ತಾ ದುಷ್ಕರ್ಮಿಯೋರ್ವ ಇಸ್ರೇಲ್ ನಾಗರಿಕರತ್ತ ಪೆಟ್ರೋಲ್ ಬಾಂಬ್ ಎಸೆದ ಘಟನೆ ಅಮೆರಿಕದ ಕೊಲೊರಾಡೋದ ಬೌಲ್ಡರ್‌ನಲ್ಲಿ ನಡೆದಿದೆ.

ಘಟನೆಯಲ್ಲಿ 6 ಮಂದಿಗೆ ಸುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಲೊರಾಡೋದ ಬೌಲ್ಡರ್‌ನಲ್ಲಿ ಗಾಜಾದಲ್ಲಿನ ಇಸ್ರೇಲ್ ಒತ್ತೆಯಾಳುಗಳ ಬಿಡುಗಡೆ ಬಗ್ಗೆ ಚರ್ಚಿಸುವ ಸಲುವಾಗಿ ಇಸ್ರೇಲ್ ನಾಗರಿಕರು ಸಭೆ ಸೇರಿದ್ದರು.

ಈ ವೇಳೆ ದುಷ್ಕರ್ಮಿ ಬಾಟಲ್‌ನಲ್ಲಿ ತುಂಬಿಸಿದ್ದ ಪೆಟ್ರೋಲ್ ಬಾಂಬ್‌ಗಳನ್ನು ನಾಗರಿಕರತ್ತ ಎಸೆದು ‘ಫ್ರೀ ಪ್ಯಾಲೆಸ್ತೀನ್’ ಎಂದು ಘೋಷಣೆ ಕೂಗಿದ್ದಾನೆ. ಜನರ ಮೇಲೆ ಫೈರ್ ಬಾಂಬ್ ಎಸೆದ ವ್ಯಕ್ತಿಯನ್ನು ಮೊಹಮ್ಮದ್ ಸಬ್ರಿ ಸೊಲಿಮಾ (45) ಎಂದು ಗುರುತಿಸಲಾಗಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸೊಲಿಮಾ ಅಮೆರಿಕದಲ್ಲಿ ಪ್ಯಾಲೆಸ್ತೀನ್ ಪರ ನಡೆಯುತ್ತಿದ್ದ ಹಲವು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

- Advertisement -

Related news

error: Content is protected !!