Monday, April 29, 2024
spot_imgspot_img
spot_imgspot_img

ಗಂಡ ಹೆಂಡತಿ ಮಧ್ಯೆ ಮಗುವಿಗಾಗಿ ಜಗಳ – ಸಮಸ್ಯೆ ಬಗೆಹರಿಸಲು ಬಂದ ಪೊಲೀಸರನ್ನೇ ಕೂಡಿ ಹಾಕಿದ ಗ್ರಾಮಸ್ಥರು

- Advertisement -G L Acharya panikkar
- Advertisement -

ಗಂಡ-ಹೆಂಡತಿಯ ಜಗಳ ಬಿಡಿಸಲು ಬಂದಿದ್ದ ಪೊಲೀಸರನ್ನೇ ಕೂಡಿಹಾಕಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಅಮ್ಮಗಾರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಅಮ್ಮಗಾರಹಳ್ಳಿ ಗ್ರಾಮದಲ್ಲಿ ಶಿವಾನಂದ ಹಾಗೂ ಚಿಂತಾಮಣಿ ತಾಲೂಕಿನ ನಾಯನಹಳ್ಳಿ ಗ್ರಾಮದ ಶಿವಾನಂದನ ಪತ್ನಿ ಐಶ್ವರ್ಯ ನಡುವೆ ಕೌಟುಂಬಿಕ ಕಲಹದಿಂದ ದೂರ ಇದ್ದರು. ಇವರಿಗೆ ಒಂದು ಗಂಡು ಮಗು ಸಹ ಇದೆ. ಗುರುವಾರ ಐಶ್ವರ್ಯ ಮಗುವನ್ನು ತನ್ನ ಜೊತೆ ಕಳುಹಿಸಿ ಕೊಡಿ ಅಂತ ಗಂಡನ ಮನೆ ಬಳಿ ಬಂದು ಗಲಾಟೆ ಮಾಡಿದ್ದಾಳೆ. ಪತಿ ಒಪ್ಪದೇ ಹೋದಾಗ 112 ಹೋಯ್ಸಳ ಪೊಲೀಸರಿಗೆ ಕರೆ ಮಾಡಿ ತನ್ನ ಹಾಗೂ ಪತಿ ನಡುವೆ ಗಲಾಟೆಯಾಗಿದೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾಳೆ.

ಬಳಿಕ ತಡರಾತ್ರಿ ಅಮ್ಮಗಾರಹಳ್ಳಿಗೆ ಬಂದ ಹೊಯ್ಸಳ ಪೊಲೀಸರು ಮಗುವನ್ನು ಕೊಡಿ, ಠಾಣೆಗೆ ಬಂದು ತಂದೆ ತಾಯಿ ಇಬ್ಬರು ನ್ಯಾಯ ಪಂಚಾಯತಿ ಮಾಡಿಕೊಂಡು ಮಗುವನ್ನು ಕರೆದುಕೊಂಡು ಹೋಗಿ. ಅಲ್ಲಿಯವರೆಗೆ ಸಾಂತ್ವನ ಕೇಂದ್ರದಲ್ಲಿ ಇರಿಸುತ್ತೇವೆ ಎಂದು ಮಗುವನ್ನು ಕರದುಕೊಂಡು ಹೋಗಿದ್ದಾರೆ. ಆದರೆ ಮಗುವನ್ನು ಸಾಂತ್ವನ ಕೇಂದ್ರಕ್ಕೆ ಬಿಡದೇ ಗ್ರಾಮದ ಮುಂಭಾಗದ ಮುಖ್ಯ ರಸ್ತೆಗೆ ಬಂದು ಐಶ್ವರ್ಯ ತಾಯಿ ಯಶೋದಮ್ಮ ಅವರಿಗೆ ಒಪ್ಪಿಸಿದ್ದಾರೆ

ಇದನ್ನು ತಿಳಿದು ಮಗುವಿನ ತಂದೆಯ ಕಡೆಯವರು ಕೆರಳಿದ್ದಾರೆ. ಮಗುವನ್ನು ತಂದು ನಮಗೆ ವಾಪಸ್ ಒಪ್ಪಿಸುವವರೆಗೂ ಹೊಯ್ಸಳ ವಾಹನವನ್ನು ಬಿಡುವುದಿಲ್ಲ ಎಂದು ಇಡೀ ಗ್ರಾಮಸ್ಥರು ಪೊಲೀಸ್ ವಾಹನ ಹಾಗೂ ಪೊಲೀಸರನ್ನು ಲಾಕ್ ಮಾಡಿದ್ದಾರೆ.

- Advertisement -

Related news

error: Content is protected !!