Sunday, June 21, 2026
spot_imgspot_img
spot_imgspot_img

ಪ್ರತಿಷ್ಠಿತ ಮಠಾಧೀಶರಿಂದ ಹೇಯ ಕೃತ್ಯ..? ವಿದ್ಯಾರ್ಥಿನಿಯರಿಗೆ ಮತ್ತು ಬರಿಸಿ ಅತ್ಯಾಚಾರ;ಪೋಕ್ಸೋ ಅಡಿ ಪ್ರಕರಣ ದಾಖಲು

- Advertisement -
- Advertisement -

ಮೈಸೂರು : ಪ್ರತಿಷ್ಠಿತ ಚಿತ್ರದುರ್ಗ ಶ್ರೀ ಮುರಗಾ ಮಠವೊಂದರ ಡಾ.ಶಿವಮೂರ್ತಿ ಸ್ವಾಮೀಜಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿಯರು ಮಹಿಳಾ ಸಾಂತ್ವನ ಮತ್ತು ವಸತಿ ಕೇಂದ್ರಕ್ಕೆ ದೂರು ನೀಡಿದ್ದಾರೆ.

ಪ್ರತಿಷ್ಠಿತ ಮಠದ ಹಾಸ್ಟೆಲ್ ನಲ್ಲಿರುವ ಕೆಲ ವಿದ್ಯಾರ್ಥಿನಿಯರ ಮೇಲೆ ಸ್ವಾಮೀಜಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಉಚಿತ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿನಿಯರು ಸರದಿಯಂತೆ ಸ್ವಾಮೀಜಿ ಹತ್ತಿರ ಹೋಗಬೇಕು. ಈ ವೇಳೆ ಸ್ವಾಮೀಜಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಾರೆ ಎನ್ನಲಾಗಿದ್ದು, ಈ ಸಂಬಂಧ ದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿಯರು ಮೈಸೂರಿನ ಒಡನಾಡಿ ಮಹಿಳಾ ಸಾಂತ್ವನ ಮತ್ತು ಮಕ್ಕಳ ವಸತಿ ಕೇಂದ್ರಕ್ಕೆ ದೂರು ನೀಡಿದ್ದಾರೆ.

ಸ್ವಾಮೀಜಿಗೆ ದಿನಾಲೂ ಒಂದು ವಿದ್ಯಾರ್ಥಿ ಈ ಮುರಾಗ ಸ್ವಾಮೀಜಿ ಗೆ ಹಣ್ಣು ತೆಗೆದುಕೊಂಡು ಹೋಗಬೇಕು ಸ್ವಾಮೀಜಿ ರೂಮ್ ಗೆ ಹೋದಮೇಲೆ ವಿದ್ಯಾರ್ಥಿಗೆ ಮತ್ತು ಬರುವ ಹಾಗೇ ಮಾಡಿ ಆ ಬಾಲಕಿ ಮೇಲೆ ಬಲವಂತದ ಲೈಂಗಿಕ ಕ್ರಿಯೆ ನಂತರ ಸ್ವಾಮೀಜಿ ಯಾರಿಗಾದರೂ ವಿಷಯ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ.

ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಚಿತ್ರದುರ್ಗ ಮುರುಗಾ ಮಠದ ಡಾ.ಶಿವಮೂರ್ತಿ ಮುರುಗಾ ಶರಣರು ಸೇರಿದಂತೆ,ಮಠದ ಮೂವರು ಹಾಗೂ ಮೈಸೂರಿನ ಇಬ್ಬರ ಮೇಲೆ ನಜರಾಬಾದ್‌ ಠಾಣೆಯಲ್ಲಿ”ಲೈಂಗಿಕ ಅಪರಾಧಗಳ ಸಂರಕ್ಷಣಾ ಕಾಯ್ದೆ(ಪೋಕ್ಸೋ) ಅಡಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!